Thursday, January 23, 2025

ಗಾಯಕ ಸಿಧು ಮೂಸೇವಾಲಾ ಹತ್ಯೆಯ ಆರೋಪಿ ಪೊಲೀಸ್‌ ಕಸ್ಟಡಿಯಿಂದ ಎಸ್ಕೇಪ್​​

ಪಂಜಾಬ: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸ್ ವಾಲಾ ಹತ್ಯೆಯ ಆರೋಪಿಗಳಲ್ಲಿ ಒಬ್ಬನಾದ ದೀಪಕ್ ಟಿನು ಪಂಜಾಬ್‌ನ ಮಾನಸಾ ಪೊಲೀಸ್‌ನ ಕಸ್ಟಡಿಯಿಂದ ಪರಾರಿಯಾಗಿದ್ದಾನೆ.

ಆರೋಪಿ ಟಿನುವನ್ನು ನಿನ್ನೆ ತಡರಾತ್ರಿ 11 ಗಂಟೆಗೆ ಪೊಲೀಸರು ಕಪುರ್ತಲಾ ಜೈಲಿನಿಂದ ಮಾನಸಾ ಪೊಲೀಸ್​ ತನಿಖಾ ಸಂಸ್ಥೆ ಕಚೇರಿಗೆ ಖಾಸಗಿ ವಾಹನದಲ್ಲಿ ಕರೆತರುತ್ತಿದ್ದಾಗ ಪೊಲೀಸ್​ರಿಂದ ತಪ್ಪಿಸಿಕೊಂಡಿದ್ದಾನೆ.

ದೀಪಕ್ ಸಿದ್ದು ಮೂಸೆ ವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಟಿನು ಆಪ್ತ ಸಹಾಯಕನಾಗಿದ್ದ ಎಂದು ಹೇಳಲಾಗುತ್ತಿದೆ. ಶೂಟರ್‌ಗಳು, ಮಾಸ್ಟರ್‌ಮೈಂಡ್‌ಗಳು ಮತ್ತು ಕೊಲೆಯಲ್ಲಿ ಭಾಗಿಯಾಗಿರುವ ಇತರರು ಎಂದು ಪಟ್ಟಿ ಮಾಡಲಾದ 15 ಜನರ ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.

RELATED ARTICLES

Related Articles

TRENDING ARTICLES