ಇಂಡೋನೇಷಿಯಾ : ಫುಟ್ಬಾಲ್ ಪಂದ್ಯ ನಡೆಯುವಾಗ ಘರ್ಷಣೆ ಉಂಟಾಗಿ 127 ಮಂದಿ ಮೃತಪಟ್ಟಿದ್ದಾರೆ.
ಇಂಡೋನೇಷಿಯಾದ ಮಲಾಂಗ್ ರೀಜೆನ್ಸಿಯ ಕಂಜುರುಹಾನ್ ಸ್ಟೇಡಿಯಂನಲ್ಲಿ ಅರೆಮಾ ಮತ್ತು ಪರ್ಸೆಬಯಾ ನಡುವೆ ಫುಟ್ಬಾಲ್ ಪಂದ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಪಂದ್ಯ ವೀಕ್ಷಣೆಗೆ ಬಂದಿದ್ದವರ ನಡುವೆ ಗಲಾಟೆ ಆರಂಭವಾಗಿದೆ. ಇದು ವಿಕೋಪಕ್ಕೆ ಹೋಗಿ ಗುಂಪು-ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ರು. ಫುಟ್ಬಾಲ್ ಪಂದ್ಯದ ನಂತರ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿ ಪರಸ್ಪರ ಹಲ್ಲೆ ನಡೆಸಿದಾಗ ಈ ಸಾವು, ನೋವು ಸಂಭವಿಸಿದೆ.
ಇನ್ನು, 2 ಪೊಲೀಸರು ಸೇರಿದಂತೆ 93 ಜನರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಎರಡು ಕಡೆ ನಡೆದ ಘರ್ಷಣೆಯಲ್ಲಿ 180ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಗಲಾಟೆಯಲ್ಲಿ ಜನರು ಸಾವನಪ್ಪಲು ಪೊಲೀಸರು ಪ್ರಯೋಗಿಸಿದ ಅಶ್ರುವಾಯುವೇ ಕಾರಣ ಎಂದುಜನರು ಕಂಡುಕೊಂಡು ಇಂಡೋನೇಷ್ಯಾದ ಪೊಲೀಸ್ ಠಾಣೆಯ ಬಳಿ ಪ್ರತಿಭಟನೆ ನಡೆಸಲಾಗಿದೆ.