Monday, December 23, 2024

ತಮ್ಮನ ಅನಾಚಾರ.. ಅಣ್ಣನಿಗೆ ಮುಜುಗರ..!

ತುಮಕೂರು :  ಜಿಲ್ಲೆಯ ಮಹಾನಗರ ಪಾಲಿಕೆ ಸಿಬ್ಬಂದಿಗೆ ಬ್ಲಾಕ್‌ ಮೇಲ್‌ ಆರೋಪ ಹಿನ್ನೆಲೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಸಹೋದರ ಪ್ರದೀಪ್‌ ವಾರಪತ್ರಿಕೆಯೊಂದರ ಸಂಪಾದಕನಾಗಿ ಕೆಲಸ ಮಾಡುತ್ತಿದ್ದಾನೆ.

ಈತ ಸಬ್ಸಿಡಿ ಸಾಲ ಮಂಜೂರು ಮಾಡಿಕೊಡುವಂತೆ ನಗರ ಜೀವನೋಪಾಯ ಕೇಂದ್ರಕ್ಕೆ ಹೋಗಿದ್ದ. ಈ ವೇಳೆ ಲಂಚದಾಸೆ ತೋರಿಸಿ ವೀಡಿಯೋ ಮಾಡಿಕೊಂಡಿದ್ದ. ಬಳಿಕ ಈ ವೀಡಿಯೋ ತೋರಿಸಿ ನಗರ ಜೀವನೋಪಾಯ ಕೇಂದ್ರದಲ್ಲಿ ಸಿಆರ್‌ಸಿ ಆಗಿ ಕೆಲಸ ಮಾಡುತ್ತಿದ್ದ ಯುವತಿಗೆ ನಿರಂತರ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ಘಟನೆ ಕುರಿತು ನಿನ್ನೆ ಸಂಜೆ ಆ ಯುವತಿ ಕೆಲಸ ಮಾಡುವ ಜಾಗಕ್ಕೆ ಬಂದು ಬೆದರಿಕೆ ಹಾಕುತ್ತಿದ್ದಾಗ ಅಲ್ಲಿದ್ದವರು ಧರ್ಮದೇಟು ಹಾಕಿದ್ದಾರೆ.

ಇನ್ನು, ಅಷ್ಟೇ ಅಲ್ಲದೇ ಮಹಾನಗರ ಪಾಲಿಕೆ ಆವರಣದಲ್ಲಿ ಪ್ರದೀಪ್‍ನ ಜೊತೆ ಬಂದಿದ್ದ ನಕಲಿ ಪತ್ರಕರ್ತರು ಸೇರಿ ಹ್ಯೂಮನ್ ರೈಟ್ಸ್ ಎಂದು ಹೇಳಿಕೊಂಡು ಬಂದವರಿಗೂ ಗೂಸಾ ಬಿದ್ದಿದೆ.

RELATED ARTICLES

Related Articles

TRENDING ARTICLES