Wednesday, January 22, 2025

ಭಾರತದಲ್ಲಿ 5G ಸೇವೆ ಕ್ಷಣಗಣನೆ ಆರಂಭ

ನವದೆಹಲಿ : ಭಾರತದಲ್ಲಿ 5G ಸೇವೆ ಆರಂಭಕ್ಕೆ ಕ್ಷಣಗಣನೆ ಆರಂಭಗೊಳ್ಳಲಿದ್ದು, ಇಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಡಿಜಿಟಲ್‌ ಕ್ರಾಂತಿಗೆ ಭಾರತ ಸಾಕ್ಷಿಯಾಗಲಿದೆ. ಇನ್ನು ಆರಂಭದಲ್ಲಿ ಆಯ್ದ ಕೆಲ ನಗರಗಳಲ್ಲಿ ಮಾತ್ರ 5ಜಿ ಸೇವೆ ಸಿಗಲಿದೆ. ಮುಂದಿನ ಕೆಲ ವರ್ಷಗಳಲ್ಲಿ ಗ್ರಾಮೀಣ ಭಾಗಗಳಲ್ಲೂ 5ಜಿ ದೊರಕಲಿದೆ.

ಇನ್ನು, 13 ನಗರಗಳಲ್ಲಿ ಹೈ ಸ್ಪೀಡ್‌ ಇಂಟರ್‌ನೆಟ್‌ ಸಿಗಲಿದ್ದು , ಮೊದಲು ಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‍ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ 5G ಸೇವೆ ಆರಂಭಗೊಳ್ಳಲಿದೆ.

RELATED ARTICLES

Related Articles

TRENDING ARTICLES