Sunday, December 22, 2024

ಸಿಪಿ ಯೋಗೆಶ್ವರ್ ಕಾರಿಗೆ ಕಲ್ಲು ತೂರಾಟ; ಹಿಂಬದಿಯ ಗ್ಲಾಸ್ ಪುಡಿಪುಡಿ

ರಾಮನಗರ: ಎಂಎಲ್​ಸಿ ಸಿ.ಪಿ ಯೋಗೆಶ್ವರ್ ಕಾರಿಗೆ ಕಲ್ಲು ತೂರಾಟ ಹಿನ್ನಲೆಯಲ್ಲಿ ಕಾರಿನ ಹಿಂಬದಿಯ ಗ್ಲಾಸ್ ಪುಡಿಪುಡಿಯಾಗಿದೆ.

ಇಂದು ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ಕಲ್ಲು ತೂರಾಟವಾಗಿತ್ತು ಈ ವೇಳೆ ಎಂಎಲ್​ಸಿ ಸಿ.ಪಿ ಯೋಗೆಶ್ವರ್ ಅವರ ಕೆಎ 51 ಎಂಆರ್​​1818 ಸಂಖ್ಯೆಯ ಪೋರ್ಡ್ ಕಂಪನಿಯ ಎಂಡೋವರ್ ಕಾರಿನ ಕಾರಿನ ಮೇಲೆ ಕಲ್ಲು ತೂರಾಟವಾಗಿತ್ತು.

ಈ ಬಗ್ಗೆ ಮಾತನಾಡಿದ ಸಿಪಿ ಯೋಗೇಶ್ವರ್​ ಅವರು, ಜೆಡಿಎಸ್​ನ ಮುಖಂಡರು ತಂಡೋಪ ತಂಡವಾಗಿ ಪಕ್ಷ ಬಿಟ್ಟು ಹೊರ ಬರುತ್ತಿದ್ದಾರೆ. ಕುಮಾರಸ್ವಾಮಿ ಅವರು ಈ ವಿಷಯವನ್ನು ಮರೆಮಾಚಲು ಈ ರೀತಿ ಮಾಡಿದ್ದಾರೆ. ಬೇರೆ ಬೇರೆ ತಾಲ್ಲೂಕಿನ ಜೆಡಿಎಸ್ ನ ಗುಂಡಾಗಳನ್ನು ಕರೆಸಿ ತಾಲೂಕಿನಲ್ಲಿ ದಾಂಧಲೆ ಮಾಡಿದ್ದಾರೆ ಎಂದರು.

ಬೆಂಗಳೂರಿನ ನರಸಿಂಹಮೂರ್ತಿ ಎಂಬಾತ ನಾಲ್ಕೈದು ಗೂಂಡಾಗಳನ್ನು ಕರೆಸಿ ನನ್ನ ಕರೆದು ಕಲ್ಲು ಎಸೆದಿದ್ದಾರೆ. ಇದು ಕುಮಾರಸ್ವಾಮಿ ಅವರಿಗೆ ಶೋಭೆ ತರುವುದಿಲ್ಲ. ನಾಲ್ಕೈದು ಜನ ಪ್ರಮುಖ ಜೆಡಿಎಸ್ ನ ಮುಖಂಡರು ಇವತ್ತು ಪ್ರತಿಭಟನೆ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಹತಾಶ ಮನೋಭಾವನೆಯಿಂದ ಇಷ್ಟೆಲ್ಲಾ ಆಗಿದೆ. ಜನರ ದೃಷ್ಟಿಯನ್ನು ಬೇರೆಡೆ ಸೆಳೆಯಲು ಈ ರೀತಿ ಮಾಡಿದ್ದಾರೆ ಎಂದು ಯೋಗೇಶ್ವರ್​ ಅವರು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

RELATED ARTICLES

Related Articles

TRENDING ARTICLES