Wednesday, January 15, 2025

ಸ್ವಚ್ಛ ಸಮೀಕ್ಷೆ ಅಭಿಯಾನದಲ್ಲಿ ಶಿವಮೊಗ್ಗ ಪಾಲಿಕೆಗೆ ನಂ 1 ಸ್ಥಾನ.!

ಶಿವಮೊಗ್ಗ: ರಾಜ್ಯದಲ್ಲಿ ಕೇಂದ್ರದಿಂದ ಅಧಿಕಾರಿಗಳು ನಡೆಸಿದ ಸ್ವಚ್ಛ ಸಮೀಕ್ಷೆ ಅಭಿಯಾನದಲ್ಲಿ ಶಿವಮೊಗ್ಗ ಮಹಾ ನಗರ ಪಾಲಿಕೆಗೆ ಪ್ರಥಮ ಸ್ಥಾನ ಪ್ರಶಸ್ತಿ ಒದಗಿ ಬಂದಿದೆ.

ಇಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಚ್ಛ ಸಮೀಕ್ಷೆ ಅಭಿಯಾನದಲ್ಲಿ ರಾಜ್ಯದ ಶಿವಮೊಗ್ಗ ಮಹಾ ನಗರ ಪಾಲಿಕೆಗೆ ಪ್ರಥಮ ಸ್ಥಾನ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರಧಾನ ಮಾಡಿದರು.

ಇಡೀ ದೇಶದಲ್ಲಿಯೇ 12 ಪಾಲಿಕೆಗಳಿಗೆ ರಾಷ್ಟ್ರಪತಿ ಮುರ್ಮು ಅವರಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅದರಂತೆ ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಸುನೀತಾ ಅಣ್ಣಪ್ಪ ಅವರು ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ ಆಯುಕ್ತ ಮಾಯಣ್ಣ ಗೌಡ ಉಪಸ್ಥಿತರಿದ್ದರು.

ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ಮೊದಲು 130 ಟನ್ ಕಸ ಸಂಗ್ರಹಣೆಯಾಗುತ್ತಿತ್ತು. ಈಗ 199 ಟನ್ ಕಸ ಸಂಗ್ರಹಣೆಯಾಗುತ್ತಿದೆ. ನಗರದಲ್ಲಿ ಕಸ ಸಂಗ್ರಹಣೆ ಮತ್ತು ಸ್ವಚ್ಚತೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಈ ಪ್ರಶಸ್ತಿ ದೊರೆತಿದೆ.

ಇನ್ನು ಸ್ವಚ್ಛ ಸಮೀಕ್ಷೆಯಲ್ಲಿ ರಾಜ್ಯದ ಹೊಸದುರ್ಗಕ್ಕೆ 2, ಮೈಸೂರಿಗೆ 3 ನೇ ಸ್ಥಾನವನ್ನ ಕೇಂದ್ರ ತಂಡ ನೀಡಿದೆ. ಪ್ರಥಮ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಶಿವಮೊಗ್ಗ ಮೇಯರ್ ಸುನಿತಾ ಅಣ್ಣಪ್ಪ ಅವರು ಸಂತಸ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES