Wednesday, January 22, 2025

ರಾಜಕಾಲುವೆ ಒತ್ತುವರಿ ತೆರವು ನಿಲ್ಲಿಸಿದ ಬಿಬಿಎಂಪಿಗೆ ಹೈಕೋರ್ಟ್ ತರಾಟೆ.!

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವನ್ನ ಜೆಸಿಬಿ ಘರ್ಜನೆ ನಿಲ್ಲಿಸಿದ ಹಿನ್ನಲೆಯಲ್ಲಿ ಬಿಬಿಎಂಪಿಗೆ ಹೈಕೋರ್ಟ್ ತರಾಟೆ ತೆಗೆದುಕೊಂಡು ಒತ್ತವರಿ ತೆರವು ಮಾಡುವಂತೆ ತಾಕೀತು ಮಾಡಿದೆ.

ಬಿಬಿಎಂಪಿ ಸೂಚನೆ ಮಾಡಿದ್ದ ಒತ್ತವರಿಯಲ್ಲಿ ಸುಮಾರು 602 ಬಾಕಿ ಇದ್ದು, ಈ ಬಗ್ಗೆ ಬಿಬಿಎಂಪಿಯಿಂದ ವಿವರ ಪಡೆದು ಹೈಕೋರ್ಟ್ ಒತ್ತುವರಿ ತೆರವು ಸರಿಯಾಗಿ ನಡೆಸುವಂತೆ ಕಿವಿಹಿಂಡಿದೆ.

ಇನ್ನು ಹೈಕೋರ್ಟ್​ ಚಾಟಿ ಬೀಸಿದ ಬೆನ್ನಲ್ಲೆ ಮತ್ತೆ ಅಪರೇಷನ್ ಬುಲ್ಡೋಜರ್ ದಸರಾ ನಂತರ ಶುರು ಮಾಡುವ ಸಾಧ್ಯತೆ ಇದೆ. ಕೆಲವು ಕಡೆ ರಾಜಕಾಲುವೆ ಒತ್ತುವರಿ ತೆರವು ಮಾಡಿದರೆ, ಕೆಲವೆಡೆ ದೊಡ್ಡವರಿಗೆ ಹೆದರಿ ಬಿಬಿಎಂಪಿ ಕೈಬಿಟ್ಟಿತ್ತು. ಈ ಕೋರ್ಟ್ ಕಿಡಿ ಬೆನ್ನಲ್ಲೆ ಮಗದೊಮ್ಮೆ ಅಪರೇಷನ್ ಬುಲ್ಡೋಜರ್ ಗೆ ಬ್ಲ್ಯೂಪ್ರಿಂಟ್ ರೆಡಿ ಬಿಬಿಎಂಪಿ ಮಾಡುತ್ತಾ ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES