ಬೆಂಗಳೂರು : PFI ಬ್ಯಾನ್ ಬೆನ್ನಲ್ಲೇ ಅಧಿಕಾರಿಗಳ ಶೋಧ ಇನ್ನೂ ಮುಂದುವರಿದಿದೆ. PFI ಮುಖಂಡರ ಬಂಧನ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. 15 ಆರೋಪಿಗಳ ಮೊಬೈಲ್ಗಳಲ್ಲಿದ್ದ ಸ್ಫೋಟಕ ಸತ್ಯವನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ.
ಮೊಬೈಲ್ಗಳನ್ನು FSLಗೆ ಕಳುಹಿಸಿದ್ದ ತನಿಖಾಧಿಕಾರಿಗಳಿಗೆ ಸ್ಫೋಟಕ ಸಾಕ್ಷ್ಯಗಳು ಸಿಕ್ಕಿವೆ.ಕೆ.ಜೆ.ಹಳ್ಳಿ ಮಾದರಿ ಧಾಂದಲೆಗೆ ಆರೋಪಿಗಳು ಸಜ್ಜಾಗಿದ್ದರು ಎಂಬುದಕ್ಕೆ ದಾಖಲೆ ಸಿಕ್ಕಿದೆ.ಅಲ್ಲದೆ, RSS ಸಿದ್ದಾಂತಗಳ ಬಗ್ಗೆ ಕತ್ತಿ ಮಸಿಯುತ್ತಿದ್ದ PFI, ಹಿಜಾಬ್, ಹಲಾಲ್ ಕಟ್ ವಿಚಾರದಲ್ಲಿ ರೊಚ್ಚಿಗೆದ್ದಿದ್ದ PFI ಮುಖಂಡರು ಹಿಂದೂ ಮುಖಂಡರ ಹತ್ಯೆಗೂ ಸ್ಕೆಚ್ ರೂಪಿಸಿದ್ರು ಎಂಬ ಅಂಶ ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಿದಾಗ ಬಯಲಾಗಿದೆ.ಅಲ್ಲದೆ, ಹರ್ಷ ಹಾಗೂ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳ ಜೊತೆಯೂ ಈ ಆರೋಪಿಗಳ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ದಾವಣಗೆರೆಯಲ್ಲಿ SDPI ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿ ಕಚೇರಿಗೆ ಬೀಗ ಹಾಕಿದ್ದಾರೆ.
ಭಾಷಾ ನಗರದ ಮುಖ್ಯ ರಸ್ತೆಯಲ್ಲಿರುವ SDPI ಕಚೇರಿ ಈ ಹಿಂದೆ PFI, CPI ಕಚೇರಿಯಾಗಿತ್ತು. ಅಲ್ಲದೆ, ಈ ಹಿಂದೆ PFI ಕಾರ್ಯಕರ್ತನಾಗಿದ್ದ ಈಗಿನ SDPI ಕಾರ್ಯಕರ್ತ ಮೆಹಬೂಬ್ ಮನೆಯಲ್ಲೂ ಶೋಧ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಇನ್ನೊಂದೆಡೆ ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣದ ಬಂಧಿತರ ಪೊಲೀಸ್ ಕಸ್ಟಡಿ ಮುಕ್ತಾಯವಾಗಿದ್ದು, ಪೊಲೀಸರು ಆರೋಪಿಗಳಿಂದ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಇದುವರೆಗೂ ಎರಡು ಬಾರಿ ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದ ಪೊಲೀಸರು, ಸೆ. 20ರಂದು ಬಂಧಿಸಿ 7 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು.ಬಳಿಕ ಮತ್ತೆ 5 ದಿನಗಳ ಕಸ್ಟಡಿಗೆ ಪಡೆದಿದ್ದರು. ಈ ಮೂಲಕ ಒಟ್ಟು 12 ದಿನ ಯಾಸಿನ್, ಮಾಜ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದೂ ಅಲ್ಲದೆ, ಸಿಐಬಿ, ಎಟಿಎಸ್ ಅಧಿಕಾರಿಗಳೂ ಕೂಡ ಶಂಕಿತರನ್ನು ವಿಚಾರಣೆ ನಡೆಸಿ ಹಲವು ಸ್ಪೋಟಕ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಒಟ್ಟಾರೆ PFI ಹಾಗೂ ಅದರ ಅಂಗಸಂಸ್ಥೆಗಳಿಗೆ ಬೀಗಮುದ್ರೆ ಹಾಕಿದ ಬೆನ್ನಲ್ಲೇ ಬಂಧಿತ PFI ಮುಖಂಡರ ಮನೆ, ಕಚೇರಿಗಳಲ್ಲಿ ಶೋಧ ಮುಂದುವರಿಸಿದ್ದಾರೆ.