Monday, December 23, 2024

ಗುಂಡು ಹಾಕುವ ಕೆಲಸ ಆರ್‌ಎಸ್ಎಸ್ ಮಾಡಲ್ಲ; ಸಂಸದ ಜಿಗಜಿಣಗಿ

ವಿಜಯಪುರ: ದೇಶದಲ್ಲಿ ಪಿಎಫ್​ಐ ಬ್ಯಾನ್​ ಮಾಡಿದಂತೆ ಆರ್​ಎಸ್​ಎಸ್​ ಬ್ಯಾನ್ ಮಾಡಲು ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ಸಂಸದ ರಮೇಶ್​ ಜಿಗಜಿಣಗಿ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಣ್ಣನಿಗೆ ತಲೆ ಇಲ್ಲ, ಗುಂಡು ಹಾಕುವ ಕೆಲಸ ಆರ್​ಎಸ್​ಎಸ್​ ಮಾಡಲ್ಲ, ಸಿದ್ದರಾಮಯ್ಯನ್ನು ಕೇಳಿ ಆರ್​ಎಸ್​ಎಸ್​ ನಡೆಸಬೇಕಿಲ್ಲ ಅದನ್ನು ನಡೆಸುವವರು ಇದ್ದಾರೆ. ಆರ್​ಎಸ್​ಎಸ್​ನಿಂದ ಯಾರಿಗೂ ಏನು ಆಗಿಲ್ಲ, ಜವಾಬ್ದಾರಿ ಸಿದ್ದರಾಮಯ್ಯ ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಸಿದ್ದರಾಮಯ್ಯ ಅವರು ಬರೀ ಆರ್​ಎಸ್​ಎಸ್​ ಅನ್ನೋದು ಅಲ್ಲ. ಪಿಎಫ್​ಐ ಏನು ಮಾಡಿದೆ ಅನ್ನೊದು ಗೊತ್ತಿಲ್ವಾ ನಿಮಗೆ ಎಲ್ಲಾ ಮುಸ್ಲಿಂರನ್ನು ಹಿಡಿದಿದ್ರಾ, ದೇಶದ್ರೋಹಿ ಕೆಲಸ ಮಾಡಬಾರದು. ಇಂದಿರಾ ಗಾಂಧಿ ಕಾಲದಲ್ಲಿ ಭಯೋತ್ಪಾದನೆ ಇತ್ತಾ, ಭಯೋತ್ಪಾದನೆ ಉತ್ಪಾದನೆ ಮಾಡಿದವರನ್ನ ದೇಶದಲ್ಲಿ ನಿಷೇಧ ಮಾಡಲಾಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ರಮೇಶ್​ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES