ಮಂಗಳೂರು : ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಮಂಗಳೂರಿನ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ ನಡೆದಿದೆ.
ಮಂಗಳೂರು ತಹಶಿಲ್ದಾರರ ಪುರಂದರ್ ಅವರನ್ನು ಬಂಧಿಸಿದ ಲೋಕಾಯುಕ್ತ ಅಧಿಕಾರಿಗಳು, ತನ್ನ ಸಹಾಯಕ ಅಧಿಕಾರಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮದ್ಯಾಹ್ನ ಲೋಕಾಯುತ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದ ತಹಶೀಲ್ದಾರರ ಸಹಾಯಕ, ಲಂಚ ಸ್ವೀಕರಿಸುವಾಗ FDA ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇನ್ನು, 4700 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದು, ಜಾಗ ಮಾರಾಟಕ್ಕೆ ಎನ್ಓಸಿ ನೀಡಲು ಅಧಿಕಾರಿ ಹಣಕ್ಕೆ ಬೇಡಿಕೆ ಇಟ್ಟಿದ್ದ, ವಿಚಾರಣೆ ಸಂದರ್ಭದಲ್ಲಿ ತಹಶಿಲ್ದಾರರ ಪುರಂದರ್ ಅವರಿಗೆ ಹಣ ಸಂದಾಯದ ಕುರಿತು ಶಿವಾನಂದ ನಾಟೇಕರ್ ಮಾಹಿತಿ ನೀಡಿದರು.