Friday, December 27, 2024

ಗೋಡೌನ್ ಒಳಗೆ ನೀರು ನುಗ್ಗಿ ನೂರಾರು ಕುರಿಗಳು ಸಾವು

ಹುಬ್ಬಳ್ಳಿ : ರಾತ್ರಿಯಿಂದ ಹುಬ್ಬಳ್ಳಿಯಲ್ಲಿ ಸುರಿಯುತ್ತಿರುವ ಮಳೆಗೆ ನೂರಾರು ಕುರಿಗಳು ಸಾವಿನಪ್ಪಿರುವ ಘಟನೆ ನಡೆದಿದೆ.

ನಗರದ ಮೇಧಾರ ಓಣಿಯ ಹತ್ತಿರದ ಮಟನ್ ಮಾರುಕಟ್ಟೆಯಲ್ಲಿ ಈ ಅವಘಡ ನಡೆದಿದೆ. ಮಾರಾಟ ಮಾಡುವ ಉದ್ದೇಶದಿಂದ ಮಟನ್ ಮಾರುಕಟ್ಟೆಯಲ್ಲಿರುವ ಗೋಡೌನ್ ಒಳಗಡೆ ನೂರಾರು ಕುರಿ ಮತ್ತು ಟಗರುಗಳನ್ನು ಒಂದೆಡೆ ಹಾಕಲಾಗಿತ್ತು. ಸತತವಾಗಿ ಸುರಿಯುತ್ತಿರುವ ಮಳೆಗೆ ಗೋಡೌನ್ ಒಳಗೆ ನೀರು ನುಗ್ಗಿವೆ. ಈ ಪರಿಣಾಮ ಹೊರಬರಲಾಗದೆ ಕುರಿಗಳು ಒಳಗಡೆಯೇ ಸಾವನಪ್ಪಿವೆ.

ಇನ್ನೂ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಕುರಿಗಳ ಮಾಲೀಕರು ಸ್ಥಳಕ್ಕೆ ದೌಡಾಯಿಸುತ್ತಿದ್ದಾತೆ. ಮತ್ತೊಂದು ಕಡೆ ಕುರಿಗಳ ಮಾಲೀಕರ ಆಕ್ರಂಧನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES