Monday, December 23, 2024

ಕಿವಿ ಓಲೆ ಕದ್ದನೆಂದು ಕಂಬಕ್ಕೆ ಕಟ್ಟ ಹಾಕಿ ಬಾಲಕನ ಮೇಲೆ ಹಲ್ಲೆ.!

ಚಿಕ್ಕಬಳ್ಳಾಪುರ: ದಲಿತರ ಮನೆಗಳಿಗೆ ಬೆಂಕಿ ಹಚ್ಚಿ ಸಜೀವವಾಗಿ ದಲಿತರನ್ನ ಕೊಂದಿದ್ದ ಕಂಬಾಲಪಲ್ಲಿ ನರಮೇಧ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದಲಿತರ ಸಜೀವ ದಹನ ಪ್ರಕರಣಕ್ಕೆ ಸಾಕ್ಷಿಯಾಗಿದ್ದ ಅದೇ ತಾಲೂಕಿನಲ್ಲೇ ಕಿವಿ ಓಲೆ ಕದ್ದ ಅಂತ ದಲಿತ ಬಾಲಕನನ್ನ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಲಾಗಿದ್ದು, ಪ್ರಕರಣ ದಲಿತರು ವರ್ಸಸ್ ಸವರ್ಣೀಯರು ಎಂಬ ವಿವಾದದ ರೂಪ ಪಡೆದುಕೊಂಡಿದೆ.

ಹೀಗೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿರೋ ತಾಯಿ-ಮಗ. ಇವರು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೆಂಪದೇನಹಳ್ಳಿ ನಿವಾಸಿಗಳು. ತಾಯಿ ರತ್ಮಮ್ಮ, ಮಗ ಯಶ್ವಂತ್ ಅಂತ. ಇವರಿಬ್ಬರು ಇದೇ ಗ್ರಾಮದ ಸವರ್ಣೀಯರಿಂದ ಹಲ್ಲೆಗೊಳಗಾಗಿ ಚಿಂತಾಮಣಿ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ರತ್ಮಮ್ಮನ ಮಗ ಯಶ್ವಂತ್, ಆಟವಾಡುವ ವೇಳೆ ಇದೇ ಗ್ರಾಮದ ನಾಗರಾಜ್ ಎಂಬುವವರ ಮಗಳು ಕುಶಲಾ ಕಿವಿಯಲ್ಲಿದ್ದ ಓಲೆಯನ್ನ ಕದ್ದಿದ್ದಾನೆ ಅಂತ ಆರೋಪಿಸಿ ಕುಶಲ ತಂದೆ ನಾಗರಾಜ್, ಇದೇ ಗ್ರಾಮದ ನಾರಾಯಣಸ್ವಾಮಿ, ನವೀನ್, ಹರೀಶ್, ಮೀನದಾಸಪ್ಪ, ಹಾಗೂ ಇತರರು ಯಶ್ವಂತ್ ನನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರಂತೆ. ಮಗನನ್ನ ಬಿಡಿಸಿಕೊಳ್ಳಲು ಬಂದಿರೋ ತಾಯಿ ರತ್ಮಮ್ಮಳ ಮೇಲೂ ಸಹ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ರತ್ನಮ್ಮ ಹಲ್ಲೆ ಮಾಡಿದ ೧೦ ಮಂದಿಯ ವಿರುದ್ದ ಚಿಂತಾಮಣಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ನಾಗರಾಜ್, ನವೀನ್, ನಾರಾಯಣಸ್ವಾಮಿ ಸೇರಿ ಮೂವರನ್ನ ಬಂಧಿಸಿಲಾಗಿದೆ.

ಕುಶಲ ತಂದೆ ನಾಗರಾಜ್ ಆರೋಪಕ್ಕೆ ಪುಷ್ಟಿ ನೀಡುವಂತೆ ಕಿವಿ ಒಲೆಯನ್ನ ಅವಿತಿಟ್ಟಿದ್ದ ಮರದ ಪೊದೆಯಿಂದ ಸ್ವತಃ ಬಾಲಕನ ಕೈಯಲ್ಲೇ ಓಲೆಯನ್ನ ತರಿಸುವ ಮೂಲಕ ಕಳ್ಳತನ ಮಾಡಿರೋದು ಸಾಬೀತು ಮಾಡಿದಂತಿದೆ. ಆದ್ರೆ ಇದಕ್ಕೆ ಬಾಲಕ ಯಶ್ವಂತ್ ಮಾತ್ರ ಅದು ನಾನು ಕದ್ದಿಲ್ಲ ಬದಲಾಗಿ ಮತ್ತೋರ್ವ ಸುರೇಶ್ ಎಂಬಾತ ನನಗೆ ನೀಡಿದ್ದು ನಾನು ಅದನ್ನ ಅಲ್ಲಿ ಬಿಸಾಡಿ ಬಂದಿದ್ದೆ. ನಾನು ಕಳ್ಳತನ ಮಾಡಿಲ್ಲ. ಅವನನ್ನ ಹಿಡಿದುಕೊಳ್ಳುವ ಬದಲು ನಮ್ಮ ಮನೆಗೆ ನುಗ್ಗಿ ನನ್ನನ್ನ ಎಳೆದುಕೊಂಡು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ರು ಅಂತ ಬಾಲಕ ಹಾಗೂ ಬಾಲಕನ ತಾಯಿ ಆರೋಪಿಸಿದ್ದಾನೆ.

ಸದ್ಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದವರ ವಿರುದ್ದ ಎಸ್​ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದರೆ. ಇತ್ತ ಬಾಲಕನ ವಿರುದ್ದ ಕಳ್ಳತನದ ಆರೋಪದ ಮೇರೆಗೆ ಪ್ರತಿದೂರು ಸಹ ದಾಖಲಾಗಿದೆ.

ಒಟ್ನಲ್ಲಿ ಬಾಲಕನ ಕಳ್ಳತನ ಆರೋಪಕ್ಕೆ ಸಾಕ್ಷಿಯಾಗಿ ವಿಡಿಯೋ ಇದ್ದು, ಪೊಲೀಸರಿಗೆ ಬಾಲಕನನ್ನ ಒಪ್ಪಿಸಬೇಕಿತ್ತು ಅದು ಬಿಟ್ಟು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರೋದು ಕಾನೂನು ವಿರುದ್ದವಾಗಿದ್ದು ಸದ್ಯ ಎರಡು ಕಡೆಯವರ ಪೊಲೀಸ್ ಠಾಣೆ ಕೋರ್ಟ್ ಕಚೇರಿ ಅಲೆಯಬೇಕಿದೆ.

ಮಲ್ಲಪ್ಪ. ಎಂ.ಶ್ರೀರಾಮ್.ಪವರ್ ಟಿವಿ. ಚಿಕ್ಕಬಳ್ಳಾಪುರ.

RELATED ARTICLES

Related Articles

TRENDING ARTICLES