Wednesday, January 22, 2025

ರಾಜಧಾನಿಯಲ್ಲಿ ಜಿಟಿಜಿಟಿ ಮಳೆ

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆಲಸಕ್ಕೆ ಹೋಗುವವರಿಗೆ ಅಡ್ಡಿ ಉಂಟಾಗಿದೆ.

ನಗರದ ಜೆ.ಪಿ ನಗರ, ರಾಮಕೃಷ್ಣ ಆಶ್ರಮ, ಲಾಲ್ ಬಾಗ್, ಮಾವಳ್ಳಿ, ಜೆಸಿ ರೋಡ್ ಹಾಗೂ ಟೌನ್ ಹಾಲ್, ಕಾರ್ಪೋರೇಷನ್, ಮೈಸೂರ್ ಬ್ಯಾಂಕ್ ಸರ್ಕಲ್, ಮಾರ್ಕೆಟ್, ವಿಲ್ಸನ್​ಗಾರ್ಡನ್​, ಕೋರಮಂಗಲ, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್​, ಕಬ್ಬನ್ ಪಾರ್ಕ್, ಶಾಂತಿನಗರ, ಮೈಸೂರು ರೋಡ್, ಚಾಮರಾಜಪೇಟೆ, ಗಾಳಿ ಆಂಜನೇಯ ದೇವಾಲಯ, ವಿಜಯನಗರ, ಬಾಪೂಜಿನಗರ ಸೇರಿದಂತೆ ಹಲವೆಡೆ ಸುತ್ತಮುತ್ತ ಸುರಿಯುತ್ತಿರುವ ಮಳೆರಾಯ ಮುಂದಿನ ಕೆಲ ಗಂಟೆಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಮುಂದುವರೆಯುವ ಸಾಧ್ಯತೆ ಇದೆ.

ಇನ್ನು, ಮಿಂಚು, ಗುಡುಗು ಸಹಿತ ಸಾಧಾರಣ ಮಳೆ ಮುನ್ಸೂಚನೆ ನೀಡಿದ್ದು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಮಂಡ್ಯ, ಹಾಸನ,ತುಮಕೂರು ಸೇರಿದಂತೆ ಹಲವೆಡೆ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ.

RELATED ARTICLES

Related Articles

TRENDING ARTICLES