Sunday, January 19, 2025

ಥೇಟರ್​ಗಳಲ್ಲಿ ನಾಡಗೀತೆ ಹಾಕುವಂತೆ ಸಿಎಂಗೆ ನಟ ಝೈದ್ ಖಾನ್ ಮನವಿ.!

ಬೆಂಗಳೂರು; ರಾಷ್ಟ್ರಗೀತೆಯ ಜೊತೆಗೆ ನಾಡಗೀತೆಯನ್ನೂ ಕರ್ನಾಟಕದ ಥೇಟರ್​ಗಳಲ್ಲಿ ಹಾಕುವಂತೆ ಶಾಸಕ ಜಮೀರ್​ ಅಹಮ್ಮದ್​ ಪುತ್ರ, ನಟ ಝೈದ್ ಖಾನ್ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

ನಾಡು, ನುಡಿಯ ಸಂಕೇತವಾಗಿರುವ ರಾಷ್ಟ್ರ ಗೀತೆ ಹಾಗೂ ನಾಡಗೀತೆಗಳು ಹಿರಿಯರಿಂದ ಕಿರಿಯವರೆಗೂ ಎಲ್ಲರ ಬಾಯಲ್ಲೂ ಮೊಳಗಬೇಕು. ಹೀಗಾಗಿ ರಾಷ್ಟ್ರ ತೀತೆ ಜತೆಗೆ ನಾಡಗೀತೆಯ ಮಹತ್ವ ಯುವಕರ ಬಾಯಲ್ಲಿ ಉಳಿಯಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಿದ್ದಾರೆ.

ಇನ್ನು ನಟ ಝೈದ್ ಖಾನ್​ ಅವರ ನಟನೆಯ ಕನ್ನಡ, ತಮಿಳು ಸೇರಿದಂತೆ ಪ್ಯಾನ್ ಇಂಡಿಯಾ ಚಿತ್ರವಾದ ‘ಬನಾರಸ್’ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿರುವ ವೇಳೆಯಲ್ಲಿ ನಾಡಗೀತೆ ಬಗ್ಗೆ ಮನವಿ ಮಾಡಿಕೊಂಡಿರುವುದು ಸಿನಿಮಾ ಮಂದಿಗರ ಬಾಯಲ್ಲಿ ಚರ್ಚೆ ಆಗುತ್ತಿದೆ.

RELATED ARTICLES

Related Articles

TRENDING ARTICLES