Sunday, November 3, 2024

ಯುವ ದಸರಾದಲ್ಲಿ ಯುವರಾಜನ ಅಲೆ.. ಅಶ್ವಿನಿ ಕಣ್ಣೀರು..!

ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲೂ ಅಪ್ಪು ಹೆಸ್ರು ದಶದಿಕ್ಕುಗಳಲ್ಲೂ ಝೇಂಕರಿಸಿದೆ. ಧ್ರುವ ತಾರೆ, ಬಂಗಾರದ ಮನುಷ್ಯ ಅಪ್ಪು ಜನಸಾಗರದ ನಡುವೆ ಇನ್ನೂ ಜೀವಂತವಾಗಿದ್ದರು. ಅಭಿಮಾನಿಗಳು ಯುವರತ್ನನನ್ನು ನೆನೆದು ಭಾವುಕರಾಗಿದ್ರು. ನೆನಪಿನ ಅಲೆಗಳ ಮೇಲೆ ಯುವರಾಜನ ಯುವ ದಸರಾ ಅಕ್ಷರಶಃ ಅಪ್ಪು ದಸರಾ ಆಗಿತ್ತು. ಈ ನಡುವೆ ಜನರ ಪ್ರೇಮ ಕಂಡು ಅಶ್ವಿನಿ ಅತ್ತಿದ್ದು ಎಲ್ಲರ ಹೃದಯ ಕಲಕಿತು.

  • ಗಂಧದ ಗುಡಿ ಟೀಸರ್​​ಗೆ ಸಖತ್​ ಡಿಮ್ಯಾಂಡ್​​​​​.. ಶಿಳ್ಳೆ ಚಪ್ಪಾಳೆ

ಇಡೀ ಪ್ರಪಂಚದಲ್ಲಿ ಇತಿಹಾಸದ ಪುಟಗಳನ್ನು ತಿರುವಿ ಹಾಕಿದ್ರೂ ಅಪ್ಪುಗೆ ಸಿಕ್ಕ ಪ್ರೀತಿ, ಅಭಿಮಾನ ಇನ್ಯಾರಿಗೂ ಸಿಕ್ಕಿರಲು ಸಾಧ್ಯವಿಲ್ಲ. ಅಪ್ಪನಂತೆ ಬಾಳಿ ಬದುಕಿದ ಮುತ್ತು ಸನ್​ ಆಫ್​ ಮುತ್ತುರಾಜ್​​ ಪುನೀತ್​​​. ಬಾರತೀಯ ಚಿತ್ರರಂಗದ ಸೂಪರ್​ ಸ್ಟಾರ್​ಗಳು ಅಪ್ಪು ನೆನೆದ್ರೆ ಸಾಕು ಭಾವುಕರಾಗಿ ಬಿಡ್ತಾರೆ. ಇದೀಗ ಮೈಸೂರಿನ ಯುವ ದಸರಾದಲ್ಲೂ ಅಪ್ಪು ಝೇಂಕಾರ ಮಾರ್ದನಿಸಿದೆ.

ಯೆಸ್​​.. ದೇವತಾ ಮನುಷ್ಯ ಈತ. ರೀಲ್​​ ಸ್ಟಾರ್​ ರಿಯಲ್​​ ಲೈಫಲ್ಲೂ ಸೂಪರ್​ ಸ್ಟಾರ್​ ಆಗಿ ಬದುಕಿದ ಪರಿಗೆ ಇಡೀ ಇಂಡಿಯಾ ಫಿದಾ ಆಗಿದೆ. ಮನೆ ಮೆನೆಯಲ್ಲೂ ಕೃಷ್ಣ, ರಾಮ, ಆಂಜನೇಯನ ಪಕ್ಕ ಅಪ್ಪು ಫೋಟೋ ದೇವರ ಅವತಾರ ತಾಳಿದ್ದಾನೆ. ಭಕ್ತ ಪ್ರಲ್ಹಾದನಿಗೆ ಕನ್ನಡಿಗರು ಕೊಟ್ಟ ಗೌರವ, ಪ್ರೀತಿಯನ್ನು ಹೇಳೋಕೆ ಪದಗಳು ಸಾಲದು. ಇದೀಗ ಯುವ ದಸರಾದಲ್ಲಿ ಅಪ್ಪು ಅಭಿಮಾನಿಗಳ ಅಭಿಮಾನ ಕಂಡು ಪತ್ನಿ ಅಶ್ವಿನಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಮೈಸೂರಿನ ದಸರಾ ಉತ್ಸವದಲ್ಲಿ ಅಪ್ಪುಗಾಗಿ ಒಂದು ಕಾರ್ಯಕ್ರಮವನ್ನು ಮೀಸಲಿಡಲಾಗಿತ್ತು. ಯುವಕರ ಪಾಲಿನ ಆರಾಧ್ಯ ಧೈವವಾಗಿರೋ ಪುನೀತ್​ ರಾಜ್​​​ಕುಮಾರ್​​ ಯುವ ದಸರಾದ ಕೇಂದ್ರ ಬಿಂದುವಾಗಿದ್ದರು. ಜತೆಗೆ ಅತಿಥಿಯಾಗಿ ಆಗಮಿಸಿದ್ದ ಅಶ್ವಿನಿ ಪುನೀತ್​ ರಾಜ್​ಕುಮಾರ್​​ ಗಂಧದ ಗುಡಿ ಚಿತ್ರದ ಟೀಸರ್​ ಕಂಡು ಕಣ್ಣೀರಾಕಿಬಿಟ್ರು. ಸುತ್ತ ನೆರೆದಿದ್ದ ಅಭಿಮಾನಿಗಳ ಪ್ರೀತಿಗೆ ದುಃಖ ಉಮ್ಮಳಿಸಿ ಬಂದು ಅತ್ತು ಬಿಟ್ರು.

ಲಕ್ಷಾಂತರ ಜನ್ರ ನಡುವೆ ಅಪ್ಪು ಭಾವಚಿತ್ರದ ಭಾವುಟಗಳು ಹಾರಾಡಿದ್ವು. ನೆರೆದಿದ್ದ ಎಲ್ರೂ ಅಪ್ಪು ಹೆಸ್ರನ್ನು ಸಾರಿ ಸಾರಿ ಕೂಗಿ ಹೇಳ್ತಿದ್ರು. ಇಷ್ಟೆಲ್ಲಾ ನಿಷ್ಕಲ್ಮಶ ಪ್ರೀತಿ ಸಂಪಾದಿಸಿದ ಅಪ್ಪುನಾ ಪತಿಯಾಗಿ ಪಡೆದ ಅಶ್ವಿನಿ ಅವ್ರಿಗೆ ಆ ಕ್ಷಣ ತೀರಾ ಬಾವುಕದ ಕ್ಷಣವಾಗಿತ್ತು. ಹಾಗಾಗಿ ಎಷ್ಟೆ ತಡೆದ್ರೂ ಕಂಬನಿ ಮಾತ್ರ ಉಮ್ಮಳಿಸಿ ಬಂತು. ಜತೆಗೆ ಅಭಿಮಾನಿಗಳ ಒತ್ತಾಯದ ಮೇರೆಗೆ ಗಂಧದ ಗುಡಿ ಟೀಸರ್​​ನಾ ಎರಡು ಬಾರಿ ಪ್ರದರ್ಶಿಸಲಾಯಿತು. ಎನಿವೇ, ಅಪ್ಪು ಮಾತ್ರ ಸದಾ ಜೀವಂತ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES