ಚಾಮರಾಜನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಜಮ್ಮುವರೆಗೆ ಭಾರತ್ ಜೋಡೋ ಯಾತ್ರೆ ಸುಮಾರು 150 ದಿನಗಳ ಕಾಲ 3500 ಕಿಮೀ ಸಾಗಲಿದೆ. ಕಳೆದ ಸೆ.7 ರಿಂದ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆ ಈಗ ರಾಜ್ಯಕ್ಕೆ ಎಂಟ್ರಿಕೊಟ್ಟಿದೆ.
ಇಂದು ಈ ಯಾತ್ರೆ ಚಾಮರಾಜನಗರದ ಗುಂಡ್ಲುಪೇಟೆಯಿಂದ ಆರಂಭವಾಗಲಿದ್ದು 8 ಜಿಲ್ಲೆಗಳಲ್ಲಿ 510 ಕಿ.ಮೀ ಸಾಗಲಿದೆ. ರಾಹುಲ್ ಗಾಂಧಿ ಅವ್ರು ಈಗಾಗಲೇ ಕೇರಳ, ತಮಿಳುನಾಡಿನಲ್ಲಿ ಪಾದಯಾತ್ರೆ ಮಾಡಿದ್ದಾರೆ. ಇವತ್ತು ಗುಂಡ್ಲುಪೇಟೆಯಿಂದ ಕರ್ನಾಟಕದಲ್ಲಿ ಪಾದಯಾತ್ರೆ ಮಾಡಲಿದ್ದು, ಈ ಭಾರತ್ ಜೋಡೋ ಯಾತ್ರೆಯ ಕಾರ್ಯಕ್ರಮದಲ್ಲಿಂದು ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.
ಸ್ವಾತಂತ್ರ್ಯ ನಂತರ ಇಷ್ಟೊಂದು ದೂರದ ಪಾದಯಾತ್ರೆಯನ್ನ ಯಾವ ಪಕ್ಷ, ನಾಯಕ ಮಾಡಿರಲಿಲ್ಲ. ರಾಹುಲ್ ಗಾಂಧಿ ಅವ್ರು ಕೋಮುವಾದ ರಾಜ ಕಾರಣದಿಂದ ಬೇಸತ್ತಿದ್ದಾರೆ. ಮೋದಿ ಪ್ರಧಾನಿ ಆದಮೇಲೆ ದೇಶದಲ್ಲಿ ಧರ್ಮ, ಕೋಮು, ದ್ವೇಷದ ರಾಜಕಾರಣವನ್ನು ಮಾಡ್ತಿದ್ದಾರೆ. ರೈತರು, ಮಹಿಳೆಯರು ಆತಂಕದಿಂದ ಬದುಕುವ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ ಎಂದರು.
ಇನ್ನು ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ನಂಬಿಕೆ ಇಟ್ಟುಕೊಂಡಿಲ್ಲ. ಒಬ್ಬ ವ್ಯಕ್ತಿ ಒಬ್ಬನ ಐಡಿಹಾಲಜಿಯಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಬೇರೆ ಸಂವಿಧಾನದ ತರುತ್ತೇವೆ, ಈ ಸಂವಿಧಾನದ ಬೇಡ ಎಂದು ಹೇಳುತ್ತಿದ್ದಾರೆ. ಇದು ಮೇಲಿನವರಿಗೆ ಗೊತ್ತಿಲ್ಲ ಅನ್ನುವಂತಿಲ್ಲ. ದೇಶದಲ್ಲಿ ಶಾಂತಿ ಸಾಮರಸ್ಯ ಇರಬಾರದು, ಜನ್ರನ್ನ ಧರ್ಮದ ಆಧಾರದ ಮೇಲೆ ವಿಭಾಗ ಮಾಡಿ ಓಟಿನ ರಾಜಕೀಯ ಮಾಡ್ತಿದ್ದಾರೆ ಎಂದು ಹರಿಹಾಯ್ದರು.
ಇವತ್ತು ಕೇವಲ ಕಾಂಗ್ರೆಸ್ ಪಕ್ಷ ಅಷ್ಟೇ ಹೋರಾಟ ಮಾಡ್ತಾ ಇಲ್ಲ. ಹೋರಾಟಗಾರರು ವಿಚಾರವಂತರು ಬರಹಗಾರರು, ಎಲ್ಲರೂ ದೇಶದ ಉಳಿವಿಗೆ ಟೊಂಕ ಕಟ್ಟಿ ನಿಂತಿರೋದು ಒಳ್ಳೆಯ ಬೆಳವಣಿಗೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ರಾಜ್ಯ ಬಿಜೆಪಿ ಸರ್ಕಾರ 40% ಅನ್ನೋದು ಜನ ಜನಿತ ವಾಗಿದೆ. ಕೊಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡಲು ರಾಹುಲ್ ಗಾಂಧಿ ನೇತೃತ್ವ ವಹಿಸಿದ್ದಾರೆ. ಇದು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ನಮ್ಮ ಪ್ಲೆಕ್ಸ್ ಗಳನ್ನು ಅರಿದು, ಕಪ್ಪು ಮಸಿ ಬಳಿಯುತ್ತಿದ್ದಾರೆ. ಬಿಜೆಪಿ ನಾಯಕರು ರಾಜ್ಯದಲ್ಲಿ ಎಲ್ಲೂ ತಿರುಗಾಡಲು ನಮ್ಮ ಕಾರ್ಯಕರ್ತರು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
6 ತಿಂಗಳ ಬಳಿಕ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಎಲ್ಲಾ ಪೊಲೀಸ್ ನವರು ಕೆಟ್ಟವರಲ್ಲ. ಕೆಲವರು ಪೊಲೀಸರು ಸಾಮೀಲು ಆದ್ರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.