Monday, December 23, 2024

ಡಿಕೆಶಿ ಯಾಮಾರಿಸಿ ರಾಹುಲ್ ಗಾಂಧಿಗೆ ಸ್ವಾಗತ ಕೋರಿದ ಸಿದ್ದರಾಮಯ್ಯ

ಚಾಮರಾಜನಗರ; ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಯಾಮಾರಿಸಿ ರಾಹುಲ್ ಗಾಂಧಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ವಾಗತ ಕೋರಿದ್ದಾರೆ.

ಜಿಲ್ಲೆಯ ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಬಳಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಸ್ವಾಗತಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ, ಅದಕ್ಕೂ ಮೊದಲೇ ಅರಣ್ಯ ಪ್ರದೇಶದ ಮಧ್ಯ ಸಿದ್ದರಾಮಯ್ಯ ಬಂದು ರಾಹುಲ್ ಗಾಂಧಿ ಅವರನ್ನ ಸ್ವಾಗತ ಮಾಡಿದ್ದಾರೆ.

ಇನ್ನು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್​ ಜೋಡೋ ಯಾತ್ರೆ ರಾಜ್ಯಕ್ಕೆ ಎಂಟ್ರಿಯಾಗಿದೆ. ಈಗ ಸ್ವಾಗತ ಕೋರುವಾಗಲೂ ಕಾಂಗ್ರೆಸ್ ಬಣ ರಾಜಕೀಯ ವ್ಯಕ್ತವಾಗಿದೆ.

ಇಷ್ಟು ದಿನ ಭಾರತ್ ಜೋಡೋ ಯಾತ್ರೆಯ ವೇದಿಕೆ ಕಾರ್ಯಕ್ರಮದ ಸಿದ್ದತೆಯನ್ನ ಡಿಕೆ ಶಿವಕುಮಾರ್​ ಅವರು ನೋಡಿಕೊಳ್ಳುತ್ತಿದ್ದರು. ಈಗ ಡಿಕೆಶಿಯನ್ನು ಬಿಟ್ಟು ಒಬ್ಬರೇ ಆಗಮಿಸಿ ರಾಹುಲ್​ ಗಾಂಧಿ ಅವ್ರನ್ನ ಸ್ವಾಗತಿಸಿದ್ದಾರೆ. ನಂತರ ದಾರಿ ಮದ್ಯ ಖಾಸಗಿ ರೆಸಾರ್ಟ್ ಗೆ ಬೇಟಿ‌ ನೀಡಿ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರು ಬೆಳಿಗ್ಗೆಯ ಉಪಹಾರ ಸೇವಿಸಿದ್ದಾರೆ.

RELATED ARTICLES

Related Articles

TRENDING ARTICLES