Monday, December 23, 2024

ಪುಷ್ಪ-2 ಐಟಂ ಸಾಂಗ್ ಗುಂಗು.. ಕಾಜಲ್ ಗ್ಲಾಮರ್​​​​ ರಂಗು

ಪುಷ್ಪ ಚಿತ್ರದಲ್ಲಿ ಸೊಂಟ ಬಳುಕಿಸಿ ಚಿತ್ರರಸಿಕರ ಎದೆಯೊಳಗೆ ಚಿಟ್ಟೆ ಬಿಟ್ಟಿದ್ದ ಹಾಟ್​ ಹಾಟ್​​ ಬೆಡಗಿ ಸಮಂತಾ. ಈ ಬಾರಿ ಪುಷ್ಪ ಸೀಕ್ವೆಲ್​​​ಗೆ ಕಿಕ್ಕೇರಿಸೋಕೆ, ಹುಚ್ಚೆಬ್ಬಿಸೋಕೆ ಬರ್ತಾ ಇರೋ ನಟಿ ಯಾರು ಗೊತ್ತಾ..? ಯೆಸ್​​​​.. ಈ ಗುಡ್​​ ನ್ಯೂಸ್​ ಕೇಳಿದ್ರೆ ಪಡ್ಡೆ ಹೈಕಳ ಎದೆಯಲ್ಲಿ ಚುಟು ಚುಟು ಅನ್ನುತ್ತೆ. ಯಾರು ಆ ಗಾರ್ಜಿಯಸ್​​ ಬ್ಯೂಟಿ ಗೊತ್ತಾ..? ನೀವೇ ಓದಿ.

  • ಪಾರ್ಟಿ ಸಾಂಗಿಗೆ ಸೊಂಟ ಬಳುಕಿಸ್ತಾರೆ ಮಗಧೀರ ಬ್ಯೂಟಿ..!

ಪ್ಯಾನ್​ ಇಂಡಿಯಾ ಲೆವೆಲ್​​ನಲ್ಲಿ ಕಮಾಲ್​ ಮಾಡಿದ್ದ ಅಲ್ಲು ಅರ್ಜುನ್​ ಅಭಿನಯದ ಸಿನಿಮಾ ಪುಷ್ಪ. ತದ್ದೋದೆ ಇಲ್ಲ ಅನ್ನೋ ಡೈಲಾಗ್​​​ಗೆ ಸಿನಿಪ್ರಿಯರನ್ನು ಮರುಳು ಮಾಡಿದ್ದ ಬ್ಲಾಕ್​ ಬಸ್ಟರ್​​​ ಚಿತ್ರಕಥೆ. ಈ ಚಿತ್ರದಲ್ಲಿ ಊ ಆಂಟಾವಾ ಹಾಡಿಗೆ ಮೈ ಕೈ ಕುಣಿಸಿದ್ದ ಸಮಂತಾ ಪೋಲಿ ಹುಡುಗರ ಮೈ ಬಿಸಿ ಮಾಡಿದ್ರು. ಇದೀಗ ಪುಷ್ಪ ಸೀಕ್ವೆಲ್​ ಸಜ್ಜಾಗ್ತಿದೆ. ಈ ದಿಲ್​ ಥ್ರಿಲ್​ ಮಾಡೋ ಪಾರ್ಟಿ ಸಾಂಗ್​ ಇರಲಿದೆ.

ಊ ಆಂಟಾವ ಹಾಡಿನ ಕ್ರೇಜ್​ಗೆ ಎಲ್ಲರ ಮಂತ್ರಮುಗ್ಧವಾಗಿದ್ರು. ರೀಲ್ಸ್​ ಮಾಡಿ ಎಂಜಾಯ್​ ಮಾಡಿದ್ರು. ಇದೀಗ ಸೀಕ್ವೆಲ್​ ಚಿತ್ರದ ಹಾಡಿಗೆ ಮಗಧೀರ ಬ್ಯೂಟಿ ಕಾಜಲ್​​​ ಹೆಜ್ಜೆ ಹಾಕಲಿದ್ದಾರೆ. ಈ ಬಾರಿ ಮಸಾಲಾ ಹಾಡಿಗೆ ಕಿಕ್ಕು ಕೊಡಲಿದ್ದಾರಂತೆ ಕಾಜಲ್​.

ಜನತಾ ಬಜಾರ್​ನಲ್ಲಿ ಐಟಂ ಸಾಂಗಿಗೆ ಕುಣಿದಿದ್ದ ಕಾಜಲ್​​ ಕಂಡು ಫ್ಯಾನ್ಸ್​ ಕೂಡ ಚಿಲ್​ ಆಗಿದ್ದಾರೆ. ಇದೀಗ ಪುಷ್ಪ 2 ಚಿತ್ರದಲ್ಲಿ ಕಾಜಲ್​​ ಗ್ಲಾಮರ್​ ಡಾಲ್​​ ಆಗಿ ಸ್ಟೆಪ್ ಹಾಕಲಿದ್ದಾರೆ. ಒಟ್ನಲ್ಲಿ ಸ್ಯಾಮ್​ ಒನಪು ವಯ್ಯಾರದ ಮುಂದೆ ಕಾಜಲ್​ ಕಿಕ್ಕು ಕೆಲಸ ಮಾಡುತ್ತಾ ಕಾದು ನೋಡಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​​ ಟಿವಿ

RELATED ARTICLES

Related Articles

TRENDING ARTICLES