Wednesday, January 15, 2025

ಟಿ-20 ವಿಶ್ವಕಪ್​ ವಿಜೇತ ತಂಡಕ್ಕೆ ಬಹುಮಾನದ ಮೊತ್ತ ಘೋಷಣೆ.!

ನವದೆಹಲಿ: ನವೆಂಬರ್ 13 ರಂದು ಮೆಲ್ಬೋರ್ನ್‌ನಲ್ಲಿ ಟಿ-20 ವಿಶ್ವಕಪ್ ಪೈನಲ್​ ಪಂದ್ಯದ​ ವಿಜೇತ ತಂಡಕ್ಕೆ ನೀಡುವ ಬಹುಮಾನದ ಮೊತ್ತವನ್ನ ಐಸಿಸಿ ಇಂದು ಅಧಿಕೃತವಾಗಿ ಘೋಷಣೆ ಮಾಡಿದೆ.

ನವೆಂಬರ್ 13 ರಂದು ಮೆಲ್ಬೋರ್ನ್‌ನಲ್ಲಿ ನಡೆಯುವ ಫೈನಲ್​ ಪುರುಷರ ಟಿ-20 ವಿಶ್ವಕಪ್​ನಲ್ಲಿ ಗೆಲುವು ಸಾಧಿಸುವ ತಂಡಕ್ಕೆ 13 ಕೋಟಿ ರೂ ದೊರಯಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಇಂದು ದೃಢಪಡಿಸಿದೆ.

ಒಟ್ಟು 45 ಕೋಟಿ ರೂ ಟಿ-20 ವಿಶ್ವಕಪ್​ಗೆ ಘೋಷಣೆ ಮಾಡಿದ್ದು, ಇದರಲ್ಲಿ ಫೈನಲ್​ ಪಂದ್ಯದಲ್ಲಿ ಸೋತ ತಂಡಕ್ಕೆ 6.5 ಕೋಟಿ ರೂ, ಸೆಮಿ ಫೈನಲ್​ನಲ್ಲಿ ಸೋತ ತಂಡಗಳಿಗೆ 3.2 ಕೋಟಿ ರೂ ಪಡೆಯುತ್ತಾರೆ. ಇನ್ನು ಸೂಪರ್ 12 ರಲ್ಲಿ ನಿರ್ಗಮಿಸುವ ಎಂಟು ತಂಡಗಳಿಗೆ ತಲಾ 57 ಲಕ್ಷ ರೂ ಬಹುಮಾನದ ಮೊತ್ತ ದೊರೆಯಲಿದೆ.

ಇನ್ನು ಮೊದಲ ಸುತ್ತಿನ ಗೆಲುವು ದಾಖಲಿಸಿದ ತಂಡಗಳಿಗೆ 32 ಲಕ್ಷ ರೂ, ಮೊದಲ ಸುತ್ತಿನಿಂದ ನಿರ್ಗಮಿಸಿದ ತಂಡಗಳಿಗೆ 32 ಲಕ್ಷ ರೂ ನಿಗದಿಪಡಿಸಲಾಗಿದೆ. ಬರುವ ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದ ಏಳು ಸ್ಥಳಗಳಲ್ಲಿ ಟಿ-20 ವಿಶ್ವಕಪ್​ ಪಂದ್ಯಗಳು ನಡೆಯಲಿವೆ.

RELATED ARTICLES

Related Articles

TRENDING ARTICLES