ಚಿಕ್ಕೋಡಿ; ಇತ್ತೀಚಿಗೆ ಕುಡಚಿ ಮತಕ್ಷೇತ್ರದಲ್ಲಿ ಕಳಪೆ ಕಾಮಗಾರಿ ಮಾಡಿ ಕಮಿಷನ್ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಹಾರೂಗೇರಿಯಲ್ಲಿ ಸಾಮಾಜಿಕ ಕಾರ್ಯಕರ್ತರು ಬಿಜೆಪಿ ಶಾಸಕ ಪಿ ರಾಜೀವ್ ಅವರ ಮುಂದೆ ಹೇಳುವಾಗ ಬಂಧಿಸಿ ಎಂದು ಪೊಲೀಸರಿಗೆ ಅವರು ಹೇಳುವ ವಿಡಿಯೋ ವೈರಲ್ ಆದ ಬೆನ್ನಲ್ಲೆಯಲ್ಲಿ ಈ ಬಗ್ಗೆ ಪಿ ರಾಜೀವ್ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಮತಕ್ಷೇತ್ರದ ವಿನಯ್ ಎಂಬ ಯುವಕ ಮೊನ್ನೆಯಷ್ಟೆ ಪಕ್ಷದ ಸೇವಾ ಪಾಕ್ಷೀಕ ಕಾರ್ಯಕ್ರಮದಲ್ಲಿ ಗಲಾಟೆ ನಡೆದಿತ್ತು. ಕಳಪೆ ಕಾಮಗಾರಿ ಅಗಿದೆ ರಸ್ತೆಗಳಲ್ಲಿ ನಿಮ್ಮ ಪಾಲೆಷ್ಟು ಎಂದು ಬಿತ್ತಿ ಪತ್ರ ಹಿಡಿದು ನನ್ನ ಹತ್ತಿರ ಬಂದಿದ್ದ. ಆದರೆ, ನನ್ನ ವಿರೋಧ ಮಾಡಿದ್ರೆ ಅಂತವರಿಗೆ ಆ ದಿನದ ವೇತನ ಸಿಗುತ್ತದೆ. ಅದಕ್ಕಾಗಿ ಪಾಪ ಅವ ಈ ರೀತಿ ಕೆಲಸ ಮಾಡಿದ್ದಾನೆ ಎಂದರು.
ಮುಂದುವರೆದು ಮಾತನಾಡಿದ ಶಾಸಕರು, ಎಂಪ್ಲಾಯಮೆಂಟ್ ಜನರೇಷನ್ ಅಂತ ನಗುತ್ತಲೇ ಉತ್ತರ ನೀಡಿದರು. 6 ತಿಂಗಳ ಹಿಂದೆ ನನ್ನ ವಿರುದ್ದ ಈ ಯುವಕ ಪ್ರತಿಭಟನೆ ಮಾಡಿದ್ದ, ಒಂದು ಬಾರಿ ಶವಯಾತ್ರೆ ಮಾಡಿ ನನ್ನ ಮನೆಯ ಮುಂದೆ ಒಂದು ಮಡಿಕೆ ಇಟ್ಟು ಹೋಗಿದ್ದನು. ಆತ ಅಲ್ಲಿಗೆ ಬಂದಿದ್ದು ಯಾವುದೇ ಬೇಡಿಕೆ ಇಟ್ಟುಕೊಂಡಲ್ಲ, ಅಲ್ಲಿ ಆತ ಬಂದ ಅವನ ಗುರಿಯೇ ನನ್ನ ವಿರೋಧ ಮಾಡಬೇಕು ಎಂದು ಪಿ ರಾಜೀವ್ ತಿಳಿಸಿದರು.
155 ಸಿಆರ್ಪಿಸಿ ಕ್ಲೀಯರ್ ಆಗಿ ಹೇಳುತ್ತದೆ ನಾನ್ ಕಾಜನೇಬಲ್ ಅಪೆನ್ಸ್(ಅಸನ್ನೆಯ ಪ್ರಕರಣ) ನಡೆಯುತ್ತಿದ್ದರೆ ಅಂತವರನ್ನ ವಶಕ್ಕೆ ಪಡೆಯಬೇಕು ಅಂತ ಕಾನೂನು ಹೇಳುತ್ತದೆ. ಅಲ್ಲಿ ಆತ ಯಾವುದೇ ಸ್ಪಷ್ಟೀಕರಣ, ವಿವರಣೆ ಇಲ್ಲದೆ ಬಂದು ಇಂತಹ ಕೆಲಸ ಮಾಡ್ತಾರೆ. ಕಾಂಗ್ರೆಸ್ನಿಂದ ತಾಲೂಕು ಪಂಚಾಯತಿಗೋ, ಜಿಲ್ಲಾ ಪಂಚಾಯತಿಗೋ ಚುನಾವಣಗೆ ನಿಲ್ಲಬೇಕು ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಈ ರೀತಿ ಮಾಡಿದ್ರೆ ಕಾಂಗ್ರೆಸ್ನವರು ಟಿಕೇಟ್ ಕೊಡ್ತಿನಿ ಅಂತ ಹೇಳಿದ್ದಾರೆ ಎಂದು ಆ ಯುವಕನೇ ಹೇಳಿಕೊಂಡಿದ್ದಾನೆ ಎಂದು ಪಿ ರಾಜೀವ್ ಮಾತನಾಡಿದರು.