ನವದೆಹಲಿ: ದೇಶದ್ರೋಹದ ಆರೋಪದಡಿ ಬಂಧನವಾಗಿದ್ದು ಮಾಜಿ ಜೆಎನ್ಯೂ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
2019 ರಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದ ಮೇಲೆ ಜಾಮಿಯಾ ಪ್ರದೇಶದ ಬಳಿ ಅವರು ನೀಡಿದ ಭಾಷಣಕ್ಕೆ ಸಂಬಂಧಿಸಿದಂತೆ 2020 ಫೆ. 17 ರಿಂದ ನ್ಯಾಯಾಂಗ ಬಂಧನದಲ್ಲಿದ್ದರು.
ಈಗ ಜೆಎನ್‌ಯು ಮಾಜಿ ವಿದ್ಯಾರ್ಥಿ ಶರ್ಜೀಲ್ ಇಮಾಮ್‌ಗೆ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನುಜ್ ಅಗರ್ವಾಲ್ ಶುಕ್ರವಾರ ಶಾಸನಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. 2019 ರಲ್ಲಿ ಜಾಮಿಯಾ ಪ್ರದೇಶದ ಬಳಿ ದೇಶದ್ರೋಹದ ಭಾಷಣ ಮಾಡಿದ್ದಾರೆ ಎಂದು ಆರೋಪವಿತ್ತು.
ಇನ್ನು ದೆಹಲಿ ಗಲಭೆಗೆ ಸಂಬಂಧಿಸಿದ ಇನ್ನೇರಡು ಪ್ರಕರಣಗಳಲ್ಲಿ ಶರ್ಜೀಲ್ ಕೇಸ್ಗೆ ಸಂಬಂಧಿಸಿದಂತೆ ಜಾಮೀನು ನೀಡದ ಕಾರಣ ಶಾರ್ಜೀಲ್ ನ್ಯಾಯಾಂಗ ಬಂಧನದಲ್ಲಿ ಉಳಿಯಲಿದ್ದಾರೆ.