Wednesday, January 22, 2025

ಚೆಕ್​ಗಳಿಗೆ ಸಹಿ ಹಾಕಲು ಮುರುಘಾಶ್ರೀಗೆ ಹೈಕೋರ್ಟ್​​ ಅನುಮತಿ

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಪೋಕ್ಸೋ ಕೇಸ್​​ನಲ್ಲಿ ಬಂಧನವಾಗಿರುವ ಮುರುಘಾಶ್ರೀ ಅವರಿಗೆ ಚೆಕ್​ಗಳಿಗೆ ಸಹಿ ಹಾಕಲು ಹೈಕೋರ್ಟ್​ ಅನುಮತಿ ನೀಡಿದೆ.

ಪೋಕ್ಸೋ ಕೇಸ್​​ನಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಬಂಧನವಾದ ಹಿನ್ನಲೆಯಲ್ಲಿ ಮಠದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸಂಬಳ ನೀಡಲು ಸಹಿಗೆ ಅನುಮತಿ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಈ ಹಿನ್ನಲೆಯಲ್ಲಿ ಇಂದು ಹೈಕೋರ್ಟ್​ ಅನುಮತಿ ನೀಡಿದ್ದು, ಮಠದಲ್ಲಿ ಕಾರ್ಯನಿರ್ವಹಿಸುತ್ತಿರುವ 3500 ನೌಕರರಿಗೆ ಅಕ್ಟೋಬರ್​ 3, 6, 10ರಂದು ಚೆಕ್​ಗೆ ಸಹಿ ಹಾಕಲು ಅನುಮತಿ ನೀಡಿದೆ.

ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಎಸ್‌ಜೆಎಂ ವಿದ್ಯಾಪೀಠದ ಅಡಿಯಲ್ಲಿ 150 ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಮೂರು ಸಾವಿರಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES