Monday, December 23, 2024

ಬೆಂಗಳೂರಿನ ರಸ್ತೆಗಿಳಿಯಲಿದೆ ಡಬಲ್ ಡಕ್ಕರ್ ಬಸ್..!

ಬೆಂಗಳೂರು : ಎರಡು ದಶಕಗಳ ಹಿಂದೆ ಪ್ರಯಾಣಿಕರ, ಮಕ್ಕಳ ಮನಸ್ಸು ಸೆಳೆಯುತ್ತಿದ್ದ ಡಬಲ್ ಡೆಕ್ಕರ್ ಬಸ್ ಗಳು ಸಂಚಾರ ಮತ್ತೆ ಆರಂಭವಾಗಲಿದೆ.ಹೀಗಾಗಿ ಇದು ಪ್ರಯಾಣಿಕರಲ್ಲಿ ಇನ್ನಷ್ಟು ಪುಳಕ ತರಲಿದೆ.ಬಸ್ ಗಳ ಖರೀದಿಗಾಗಿ ಬಿಎಂಟಿಸಿ ಆಡಳಿತ ಮಂಡಳಿಯಿಂದ ಹಸಿರು ನಿಶಾನೆ ಸಿಕ್ಕಿದ. ಆದರೆ ಬಸ್‌ ತಯಾರಿಕೆ ಕಂಪನಿಗಳಿಂದ ಪೂರಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಬಸ್ ಖರೀದಿ ವಿಳಂಬವಾಗಿದೆ. ಇದೀಗ ಪಾಶ್ಚಿಮತ್ಯ ದೇಶದಿಂದ ಬಸ್ ತರಸಿ ಪ್ರಾಯೋಗಿಕವಾಗಿ ಬಸ್ ರೋಡಿಗಿಳಿಸಲು ತೀರ್ಮಾನಿಸಲಾಗಿದೆ.

80 ಮತ್ತು 90ರ ದಶಕದಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಡಬ್ಬಲ್ ಡೆಕ್ಕರ್ ಬಸ್‍ಗಳದ್ದೇ ಕಾರುಬಾರು ಆಗಿದ್ದವು..ನಗರ ಬೆಳೆಯುತ್ತಾ ಹೋದಂತೆ ಮಹಾನಗರದ ರಸ್ತೆಗಳಿಂದ ಡಬ್ಬಲ್ ಡೆಕ್ಕರ್ ಬಸ್‍ಗಳು ಕಾಣೆಯಾದವು. ಇದೀಗ ಮತ್ತೆ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಲು ಡಬ್ಬಲ್ ಡೆಕ್ಕರ್ ಬಸ್‍ಗಳು ಬರುತ್ತಿವೆ. ಯುವಕರು ಮತ್ತು ಮಕ್ಕಳಿಗೆ ಬೆಂಗಳೂರಿನ ಹಳೆಯ ಐತಿಹಾಸಿಕ ವೈಭವವನ್ನು ಪರಿಚಯ ಮಾಡಿಕೊಡುವ ಉದ್ದೇಶದಿಂದ ಬಸ್ ಗಳನ್ನ ರೋಡಿಗಿಳಿಸಲು ಬಿಎಂಟಿಸಿ ತೀರ್ಮಾನಿಸಿದೆ..ಮುಂಬೈನಲ್ಲಿ ಮಾತ್ರ ಡಬ್ಬಲ್ ಡೆಕ್ಕರ್ ಬಸ್‍ಗಳ ಓಡಾಟವಿದ್ದು, ಪ್ರಾಯೋಗಿಕವಾಗಿ 5 ಬಸ್ ನ್ನ ಆರಂಭಿಸಿ, ಸಕ್ಸಸ್ ಆದರೆ ಇನ್ನಷ್ಟು ಡಬ್ಬಲ್ ಡೆಕ್ಕರ್ ಬಸ್‍ಗಳು ರೋಡಿಗೊಳಿಸಲು ನಿರ್ಧಾರ ಮಾಡಲಾಗಿದೆ.

ಬಸ್ಸುಗಳನ್ನ ಜನ ಸಾಮಾನ್ಯರ ಸಂಚಾರಕ್ಕೆ ನೀಡಬೇಕೇ ಅಥವಾ ನಗರ ಪ್ರವಾಸೋದ್ಯಮಕ್ಕೆ ಮೀಸಲಿರಿಸುವರೇ ಎಂಬುವದನ್ನ ಬಿಎಂಟಿಸಿ ಇನ್ನೂ ನಿರ್ಧಾರ ಮಾಡಿಲ್ಲ.80-90ರ ದಶಕದಲ್ಲಿ ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಶಿವಾಜಿನಗರ, ಜಯನಗರ, ಬಸವನಗುಡಿ ಹೀಗೆ ಪ್ರಮುಖ ಕೇಂದ್ರಗಳ ನಡುವೆ ಸಂಚರಿಸುತ್ತಿದ್ದ ಡಬಲ್ ಡೆಕ್ಕರ್ ಬಸ್ಗಳು ಬಳಿಕ ಕಣ್ಮರೆಯಾಗಿದ್ದವು. 2014ರಲ್ಲಿ ಒಂದೇ ಒಂದು ಬಸ್ಸನ್ನ ನಗರ ಪ್ರವಾಸಕ್ಕೆ ಮೀಸರಿಸಲಾಗಿತತ್ತು.ಆದ್ರೆ ಇದೀಗ ಮತ್ತೆ ಮೊದಲ ಬಾರಿಗೆ 5 ಬಸ್ ಓಡಿಸಲು ನಿರ್ಧಾರ ಕೈಗೊಳ್ಳಲಾಗಿದೆ..ಆರ್ಥಿಕ ಸಂಕಷ್ಟ ನಡುವೆ ತಲಾ ಒಂದು ಬಸ್ ಗೂ 2 ಕೋಟಿ ಕೊಟ್ಟು ಬಸ್ ಖರೀದಿ ಮಾಡುತ್ತಿರೋದಕ್ಕೆ ವಿರೋಧವೂ ಇದೆ..ಇದು ಕಮಿಷನ್‌ ದರಾಸೆಗೆ ಖರೀದಿ ಮಾಡಲಾಗ್ತಿದೆ ಅಂತ ಸಾರಿಗೆ ನೌಕರರ ಮುಖಂಡರು ಹೇಳ್ತಿದ್ದಾರೆ.

ಈಗಾಗಲೇ ಬಸ್ ತಯಾರಿಕಾ ಕಂಪನಿಯ ಹುಡುಕಾಟದಲ್ಲಿ ಬಿಎಂಟಿಸಿ ತೊಡಗಿದೆ. ಆದರೆ, ಯಾವುದೇ ಕಂಪನಿ ತಯಾರಿಕೆಗೆ ಮುಂದೆ ಬರೋದೆ ಇರೋದು ಬಿಎಂಟಿಸಿ ಗೆ ತಲೆ ಬೀಸಿಯಾಗಿದೆ. ಇನ್ನೊಂದೆಡೆ ಡಬಲ್ ಡೆಕ್ಕರ್ ಬಸ್ ಗಳು ಎತ್ತರವಾಗಿರುವುದರಿಂದ ಭಾರೀ ಟ್ರಾಫಿಕ್ ಇಲ್ಲದಿರುವ, ಮರ ಗಿಡಿ ಮುಂತಾದ ಯಾವುದೇ ಅಡೆ ತಡೆಗಳು ಇಲ್ಲದಿರುವ ಮಾರ್ಗದಲ್ಲಿ ಬಸ್ ಓಡಿಸೋಕೆ ನಿಗಮ ಮುಂದಾಗಿದೆ. ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES