Monday, February 24, 2025

ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ : ಸಿಎಂ ಬೊಮ್ಮಾಯಿ

ಹುಬ್ಬಳ್ಳಿ : RSS ಬ್ಯಾನ್ ಮಾಡುವಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ ನೀಡಿರುವ ವಿಚಾರಕ್ಕೆ ಸಿಎಂ ಬಸವರಾಜ್​​ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, PFI ಬ್ಯಾನ್ ಮಾಡಿರುವ ಬಗ್ಗೆ ಸಮರ್ಥನೆ ಮಾಡಿಕೊಳ್ಳಲು ಕಾಂಗ್ರೆಸ್ ಹತ್ತಿರ ಏನೂ ಇಲ್ಲ. ಅವರ ಬಳಿ ಯಾವುದೇ ಆಧಾರಗಳಿಲ್ಲ. ಈ ಹಿಂದೆ ಸಿದ್ಧರಾಮಯ್ಯನವರೇ PFI ಮೇಲಿನ ಕೇಸ್​​ಗಳನ್ನ ವಜಾ ಮಾಡಿದ್ರು ಎಂದು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದರು.

RSS ಒಂದು ದೇಶಪ್ರೇಮಿಗಳ ಸಂಘಟನೆ. RSS ದೀನ ದಲಿತರಿಗೆ, ಬಡ ಮಕ್ಕಳಿಗೆ ಹಲವಾರು ಸಂಸ್ಥೆ ಕಟ್ಟಿದ್ದಾರೆ. ಪ್ರವಾಹ ಮತ್ತು ಸಂಕಷ್ಟ ಎದುರಾದಾಗ RSS ಮುಂದೆ ನಿಂತು ಕೆಲಸ ಮಾಡಿದೆ. ಇಂತಹ ದೇಶ ಪ್ರೇಮ‌ ಸಂಘಟನೆಯನ್ನ ಬ್ಯಾನ್ ಮಾಡುವಂತೆ ಆಗ್ರಹ ಮಾಡುತ್ತಿರೋದು ದುರ್ದೈವದ ಸಂಗತಿ ಎಂದ್ರು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ನಡೆಯುತ್ತಿರುವ ವಿಚಾರ ಕುರಿತು ಮಾತನಾಡಿದ ಅವರು, ಅದು ಅವರ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ನಾನು ಯಾವ ವ್ಯಾಖ್ಯಾನ ಮಾಡಲ್ಲ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES