Wednesday, January 22, 2025

ಚಾಮರಾಜನಗರದಲ್ಲಿ ಮೊಳಗಲಿದೆ ಕೈ ರಣಕಹಳೆ

ಚಾಮರಾಜನಗರ : ರಾಜ್ಯಕ್ಕಿಂದು ಭಾರತ್ ಜೋಡೋ‌ ಯಾತ್ರೆ ಎಂಟ್ರಿಯಾಗಲಿದ್ದು, ರಾಹುಲ್ ಗಾಂಧಿಗೆ ಸ್ವಾಗತ ಕೋರಲು ಕೈ ನಾಯಕರು ಸಜ್ಜಾಗಿದ್ದಾರೆ.

ನಗರದಲ್ಲಿಂದು ಕೈ ರಣಕಹಳೆ ಮೊಳಗಲಿದ್ದು, ರಾಹುಲ್ ಗಾಂಧಿಗೆ ಸ್ವಾಗತ ಕೋರಲು ಕೈ ನಾಯಕರು ಸಜ್ಜಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಬ್ಯಾನರ್​ಗಳು ರಾರಾಜಿಸುತ್ತಿದ್ದು, ಡಾ.ಬಿ.ಆರ್.ಅಂಬೇಡರ್ ಭವನದ ಮುಂಭಾಗ ಬೃಹತ್​ ವೇದಿಕೆ ಸಿದ್ಧವಾಗಿದೆ.

ಇನ್ನು, ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಕೂರಲು ವ್ಯವಸ್ಥೆ ಮಾಡಲಾಗಿದ್ದು, ತಮಿಳುನಾಡಿನ ಗೂಡಲೂರಿನಿಂದ ರಾಜ್ಯಕ್ಕೆ ಎಂಟ್ರಿಯಾಗಲಿದೆ. ಬೆಳಗ್ಗೆ 9 ಗಂಟೆಗೆ ಗುಂಡ್ಲುಪೇಟೆಗೆ ರಾಹುಲ್​ ಗಾಂಧಿ ಆಗಮಿಸಲಿದ್ದು, 10 ರಿಂದ 11 ಗಂಟೆ ಒಳಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಬಳಿಕ ಪಾದಯಾತ್ರೆ ಆರಂಭಗೊಳ್ಳಲಿದ್ದು, ಪಾದಯಾತ್ರೆಯಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES