Monday, December 23, 2024

ಕೀನ್ಯಾ ಬಾನ ದಾರಿಯಲ್ಲಿ ಗಣಿ ಗೋಲ್ಡನ್ ಮೊಮೆಂಟ್ಸ್

ಪ್ರೀತಂ ಗುಬ್ಬಿ, ಗೋಲ್ಡನ್​ ಗಣಿ ಹಿಟ್​ ಕಾಂಬಿನೇಷನ್​​​ನಲ್ಲಿ ಬಾನದಾರಿಯಲ್ಲಿ ಟೀಮ್​​ ಕೀನ್ಯಾ ಪ್ರವಾಸದಲ್ಲಿದೆ. ಇಡೀ ಚಿತ್ರತಂಡವೆ ಕಗ್ಗತ್ತಲ ಖಂಡ ಆಫ್ರಿಕಾದಲ್ಲಿ ಲಗ್ಗೆ ಹೂಡಿದ್ದು ಸಾಹಸ ಸನ್ನಿವೇಶಗಳನ್ನು ಸೆರೆ ಹಿಡಿತಿದೆ. ಹುಡುಗಾಟದ ಹುಡುಗ ಗಣಿ ಮಾತ್ರ ಕೀನ್ಯಾದ ಗಲ್ಲಿ ಗಲ್ಲಿಗಳಲ್ಲಿ ಎಂಜಾಯ್​ ಮಾಡ್ತಿದ್ದಾರೆ. ಯೆಸ್​​ ಹೇಗಿದೆ ಗೋಲ್ಡನ್​ ಸ್ಟಾರ್​ ಗಣೇಶ್​ ಪ್ರವಾಸ ತಿಳ್ಕೋಬೇಕಾ..? ನೀವೇ ಓದಿ.

  • ಕಾಡು ಮೇಡು ಆಫ್ರಿಕಾ ಗುಹೆಗಳಲ್ಲಿ ಗಣಿ ಅಡ್ವೆಂಚರಸ್​​​

ಭಟ್ರ ಸಸ್ಯಹಾರಿ ಫುಲ್​ ಮೀಲ್ಸ್​ ಊಟ ಸವಿದ ಕನ್ನಡಿಗರು ಗಣಿಯ ನೆಕ್ಸ್ಟ್​​​​​​ ಸಿನಿಮಾ ನೋಡೋ ತವಕದಲ್ಲಿದ್ದಾರೆ. ಇದೀಗ ಮಳೆಯಲಿ ಜತೆಯಾದ ಹಿಟ್​ ಕಾಂಬೋ ಮತ್ತೆ ಒಂದಾಗಿದೆ. ಪ್ರೀತಂ ಜತೆ ಗಣಿಯ ಹೊಸ ಪ್ಯಾರ್​ ಕಹಾನಿ ಕ್ಯೂರಿಯಾಸಿಟಿ ಮೂಡಿಸಿದೆ. ಬಾನ ದಾರಿಯಲ್ಲಿ ಸಿನಿಮಾದಲ್ಲಿ ಇಬ್ರೂ ಮ್ಯಾಜಿಕ್​ ಮಾಡೋಕೆ ಬರ್ತಿದ್ದಾರೆ. ಜತೆಗೆ ಚಿತ್ರತಂಡ ಕೀನ್ಯಾ ಪ್ರವಾಸದಲ್ಲಿ ಸಖತ್​​ ಬ್ಯುಸಿಯಾಗಿದೆ.

ಮಳೆಯಲಿ ಜೊತೆಯಲಿ, ದಿಲ್​ ರಂಗೀಲಾ, 99 ಸಿನಿಮಾಗಳ ಮೂಲಕ ದಿಲ್​ ದೋಚಿರೋ ಯಶಸ್ವಿ ನಿರ್ದೇಶಕ ಪ್ರೀತಂ. ಇದೀಗ ಗಣಿ ಕೈ ಹಿಡಿದು ಆಫ್ರಿಕಾ ಕಾಡು ಮೇಡುಗಳಲ್ಲಿ ಅಡ್ವೆಂಚರಸ್​ ಕಥೆ ತೋರಿಸೋಕೆ ಹೊರಟಿದ್ದಾರೆ. ಕ್ರಿಕೆಟರ್​ ಆಗಿ ಗಣಿ, ವಾಟರ್​ ಗೇಮ್ಸ್​​​ ಸ್ಪೋರ್ಟ್​​ಮನ್​ ಆಗಿ ರುಕ್ಮಿಣಿ ವಸಂತ್​ ಕಾಣಿಸಿದ್ದಾರೆ. ಕೀನ್ಯಾ ಮಕ್ಕಳ ಜತೆ ಗಣಿಯ ಸಖತ್​ ಸ್ಟೆಪ್ಸ್​ ಸಖತ್​ ವೈರಲ್​ ಅಗಿದೆ.

ಸೆಕೆಂಡ್​ ಶೆಡ್ಯೂಲ್​ ಮುಗಿಸಿರೋ ಬಾನ ದಾರಿಯಲ್ಲಿ ಟೀಮ್​​ ಆಫ್ರಿಕಾದಲ್ಲಿದೆ. ಅಲ್ಲಿನ ದುರ್ಗಮ ಕಾಡುಗಳಲ್ಲಿ ಶೂಟಿಂಗ್​ ಕೂಡ ನಡಿತಿದೆ. ಕೀನ್ಯಾದ ರಹಸ್ಯ ಗುಹೆಗಳಲ್ಲಿ ಟಾರ್ಚ್​​ ಹಿಡಿದು ಗಣಿ ಸುತ್ತಾಡ್ತಿದ್ದಾರೆ. ಜತೆಗೆ ಗಲ್ಲಿ ಗಲ್ಲಿಯ ಸಣ್ಣ ಪುಟ್ಟ ಮಳಿಗೆಗಳಲ್ಲಿ ಬಿಂದಾಸ್​​ ಆಗಿ ಅಲೆದಾಡ್ತಿದ್ದಾರೆ. ಈ ವೀಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.

ಈ ಚಿತ್ರದಲ್ಲಿ ರುಕ್ಮಿಣಿ ವಸಂತ್​​ ಜತೆಗೆ ರೀಷ್ಮಾ ನಾಣಯ್ಯ ಕೂಡ ನಾಯಕಿಯಾಗಿ ಮಿಂಚಲಿದ್ದಾರೆ.  ರಂಗಾಯಣ ರಘು ಕಾಮಿಡಿ ಇಲ್ಲೂ ಕಂಟಿನ್ಯೂ ಆಗಲಿದೆ. ಅರ್ಜುನ್​ ಜನ್ಯಾ ಸಂಗೀತ, ಮಾಸ್ತಿ ಸಂಭಾಷಣೆ ಸಿನಿಮಾಗೆ ಪ್ಲಸ್​ ಆಗಲಿದೆ. ಶ್ರೀವಾರಿ ಟಾಕೀಸ್​ ಬ್ಯಾನರ್​ ಅಡಿಯಲ್ಲಿ ರಿಚ್​ ಆಗಿ ಮೂಡಿ ಬರ್ತಿರೋ ಸಿನಿಮಾಗೆ ಪ್ರೇಕ್ಷಕರ ರಿಯಾಕ್ಷನ್​ ಹೇಗಿರಲಿದೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES