Tuesday, November 5, 2024

ಫಾಲ್ಕೆ ಪುರಸ್ಕೃತೆ ಆಶಾ ಪಾರೇಖ್​ಗೆ ಕಾಟನ್​​​​​​​​​ಪೇಟೆ ನಂಟು..!

ಮನರಂಜನಾ ಲೋಕದ ಬಾಲಿವುಡ್ ತಾರೆ. ಅರವತ್ತು, ಎಪ್ಪತ್ತರ ದಶಕದಲ್ಲಿ ಹಿಂದಿ ಚಿತ್ರರಂಗದಲ್ಲಿ ಮಿಂಚಿದ ಮೋಹಕ ನಟಿ ಆಶಾ ಪಾರೇಖ್​​​. ಸಿನಿಮಾ ಲೋಕಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಇದೀಗ ಇವ್ರಿಗೆ  ದಾದಾ ಸಾಹೇಬ್​​ ಫಾಲ್ಕೆ ಪ್ರಶಸ್ತಿ ಮುಡಿಗೇರಿದೆ. ಬಾಲಿವುಡ್​ ಕ್ವೀನ್​​​ ಆಶಾ ಪಾರೇಖ್​​ಗೂ ಬೆಂಗಳೂರಿಗೂ ನಂಟಿದೆ. ಯೆಸ್​​. ನಿಮಗೂ ಗೊತ್ತಿಲ್ಲದ ಇಂಟ್ರೆಸ್ಟಿಂಗ್​ ಕಹಾನಿ ತಿಳಿಸ್ತೀವಿ ನೀವೇ ಓದಿ.

ಹಿಟ್​ ಗರ್ಲ್​​​​​.. ಬಾಲಿವುಡ್​ ಜುಬಿಲಿ ಗರ್ಲ್​​​ ಬಿರುದಿನ ಅಪ್ಸರೆ

ಬಾಲಿವುಡ್​​ನಲ್ಲಿ ಹಿಟ್​ ಗರ್ಲ್​ ಎಂದೇ ಖ್ಯಾತಿ ಬ್ಯುಟಿಫುಲ್​ ನಟಿ ಆಶಾ ಪಾರೇಖ್​​​. ಅರವತ್ತು ಎಪ್ಪತ್ತರ ದಶಕದಲ್ಲಿ ಹಿಂದಿ ಚಿತ್ರರಂಗದಲ್ಲಿ ಸೂಪರ್  ಹಿಟ್​ ಸಿನಿಮಾಗಳ ಮೂಲಕ ಪ್ರಖ್ಯಾತಿ ಪಡೆದ ಸಹಜ ಸುಂದ್ರಿ. ಇವ್ರ ಎಲ್ಲಾ ಸಿನಿಮಾಗಳು ಏನಿಲ್ಲಾ ಅಂದ್ರೂ 50 ದಿನಗಳ ಕಾಲ ತಪ್ಪದೇ ಓಡುತ್ತಿದ್ದವು. ಹಾಗಾಗಿಯೇ ಇವ್ರಿಗೆ ಮುಲಾಜಿಲ್ಲದೆ ಸಿಕ್ಕ ಬಿರುದು ಹಿಟ್​​ ಗರ್ಲ್​​​​​​​​.

ಅಸಲಿಗೆ ವಿಷ್ಯ ಇದಲ್ಲ. ಭಾರತೀಯ ಚಿತ್ರರಂಗದ ಪ್ರತಿಷ್ಟಿತ 52ನೇ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ  ಆಶಾ ಪಾರೇಖ್​​ ಪಾಲಾಗಿದೆ. ಯೆಸ್​​.. ದೇವಿಕಾ ರಾಣಿ ಅನಾದಿಯಾಗಿ ರಾಜ್​​ ಕಪೂರ್​​​, ಅಮಿತಾಬ್​ ಭಚ್ಚನ್​​​​​, ರಜಿನಿಕಾಂತ್​ ಅಂತಹ ಘಟಾನುಘಟಿಗಳಿಗೆ ಒಲಿದು ಬಂದಿರೋ ಗೌರವಾನ್ವಿತ ಪ್ರಶಸ್ತಿ ಈ ಬಾರಿ ಆಶಾಗೆ ಒಲಿದಿರೋದು ಹೆಮ್ಮೆಯ ವಿಚಾರ. ಜತೆಗೆ ಸಿಲ್ವರ್​ ಜೂಬಿಲಿ, ಗೋಲ್ಡನ್​ ಜೂಬಿಲಿ ಖ್ಯಾತಿಯ ಆಶಾಗೆ ಬೆಂಗಳೂರು ಕಾಟನ್​ಪೇಟೆ ನಂಟಿತ್ತು ಅನ್ನೋದು ಸರ್​​ಪರೈಸಿಂಗ್​​ ಸುದ್ದಿ.

ಯೆಸ್​.. ಆಶಾ ಹುಟ್ಟು ಜಾಲಾಡಿದ್ರೆ ಹುಟ್ಟೂರು ಬಾಂಬೆ ಅಂತಾ ತೋರಿಸುತ್ತೆ. ಆದ್ರೆ ಈ ಜನಪ್ರಿಯ ನಟಿ ಹುಟ್ಟಿದ್ದು ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ. ಐಟಿ ಸಿಟಿಯ ಕಾಟನ್​ಪೇಟೆಯಲ್ಲಿ ವಾಸವಾಗಿದ್ದ ಮೋಸ್ಟ್​ ಗಾರ್ಜಿಯಸ್​​ ಬ್ಯೂಟಿ ಕಟಿಪತಂಗ್​​ವರೆಗೂ ಬೆಳೆದದ್ದು ರೋಚಕ. ಶಾಸ್ತ್ರೀಯ ನೃತ್ಯ ಕಲಿತಿದ್ದ ಆಶಾ 1952 ರಲ್ಲಿ ಮಾ ಚಿತ್ರದಲ್ಲಿ ಬಾಲನಟಿಯಾಗಿ ಮಿಂಚಿದ್ರು. ನಂತ್ರ 16 ನೇ ವಯಸ್ಸಿನಲ್ಲಿ ಶಮ್ಮೀ ಕಪೂರ್​​ ಜತೆಗೆ ದಿಲ್​ ದೇಖೆ ದೇಖೋ ಸಿನಿಮಾ ಮೂಲಕ ಸ್ಟಾರ್​ ನಟಿಯಾದ್ರೂ. ಆನಂತರ ನಡೆದಿದ್ದು ಇತಿಹಾಸ.

95 ಸಿನಿಮಾಗಳಲ್ಲಿ ಜಗಮಗಿಸಿದ ಆಶಾ ಸಂಸಾರಿಕ ಜೀವನದಿಂದ ದೂರ ಉಳಿದ್ರು. ತೀಸ್ರಿ ಮಂಜಿಲ್​​, ಮೇರೆ ಸನಮ್​​, ಮೇರೆ ಗಾಂವ್​​​ ಮೇರಾ ದೇಶ್​​  ಸೇರಿ ಅನೇಕ ಸಿನಿಮಾಗಳು ಹಿಟ್​ ಲಿಸ್ಟ್​ ಸೇರಿವೆ. ರಾಜೇಶ್​ ಕನ್ನಾ ಜತೆಗಿನ ಕಟಿಪತಂಗ್​ ಸೂಪರ್​ ಹಿಟ್​ ಸಿನಿಮಾವಾಗಿ ದಾಖಲೆ ಬರೆಯಿತು. ಶಮ್ಮಿ, ಶಶಿ, ರಾಜೇಶ್​ ಖನ್ನಾ ಜತೆ ಸೊಂಟ ಬಳುಕಿಸಿದ ಅನಭಿಷಿಕ್ತ ರಾಣಿ ಆಶಾ. ಸೀರಿಯಲ್​​ಗಳ ನಿರ್ಮಾಣ, ನಿರ್ದೇಶನದಲ್ಲಿ ಬ್ಯುಸಿಯಾಗಿದ್ದ ಆಶಾ ಪಾರೇಖ್​ಗೆ ಫಿಲ್ಮ್​ ಫೇರ್​, ಪದ್ಮಶ್ರೀ ಸೇರಿ ಅನೇಕ ಪ್ರಶಸ್ತಿಗಳು ಬಂದಿವೆ.

ಬಣ್ಣದ ಲೋಕದಲ್ಲಿ ಹಾಡು, ನೃತ್ಯದ ಜತಗೆ ಭರ್ಜರಿ ಮನರಂಜನೆಯ ರಸದೌತಣ ನೀಡಿದ ಮೆಚ್ಚಿನ ನಟಿ ಆಶಾ ಪಾರೇಖ್​​ಗೆ ದಾದಾ ಸಾಹೇಬ್​​ ಪ್ರಶಸ್ತಿ ನೀಡಿದ್ದು ಸ್ವಾಗತಾರ್ಹ. ಗಾರ್ಡನ್​ ಸಿಟಿ ಚೆಲುವೆಯ ಈ ಸಾಧನೆ ಇತರರಿಗೂ ಮಾದರಿಯಾಗಲಿ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES