ಬೆಂಗಳೂರು : PFI ಬ್ಯಾನ್ ಆದ ಬಳಿಕ 42 PFI ಕಚೇರಿಗಳನ್ನ ನಿನ್ನೆ ಸೀಜ್ ಮಾಡಲಾಗಿದೆ. ಪೊಲೀಸರು ಡಿಸಿಗಳು ಈ ಕ್ರಮ ತೆಗೆದುಕೊಂಡಿದ್ದಾರೆ. ಮುಂದಿನ ಪ್ರಕ್ರಿಯೆ ಕಾನೂನು ಪ್ರಕಾರವೇ ಆಗಲಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಳಿ ವೇಳೆ ಏನೇನು ಸಿಕ್ಕಿದೆ. ಅದರಿಂದ ಅನೇಕ ಮಾಹಿತಿ ಲಭ್ಯವಾಗಿದೆ. ಕಾನೂನು ಪ್ರಕಾರ ದಾಳಿ ಆಗಿ ಮುಂದಿನ ಪ್ರಕ್ರಿಯೆಗಳು ನಡೆಯುತ್ತವೆ. PFI ಸಂಘಟನೆ ಮೇಲೆ ಅನೇಕ ವರ್ಷಗಳ ನಿಗಾ ಕೇಂದ್ರ ಇಟ್ಟಿತ್ತು. ಅದಾದ ಬಳಿಕವೇ ಬ್ಯಾನ್ ಮಾಡಲಾಗಿದೆ. ಮುಂದೆ ಕಾನೂನು ಪ್ರಕಾರ ಪ್ರಕ್ರಿಯೆ ನಡೆಯುತ್ತೆ ಎಂದರು.
ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಭಾರತ್ ಜೋಡೋಗೆ ಅಗತ್ಯ ಬಂದೋಬಸ್ತ್ ನೀಡಲು ಸೂಚನೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಕಾಂಗ್ರೆಸ್ ನ ಚುನಾವಣೆ ತಯಾರಿ ಬಿಟ್ಟು ಬೇರೆ ಏನು ಇಲ್ಲ. ಅದಕ್ಕೆ ಏನೇನು ಬೇಕೋ ಅದನ್ನ ಕಾಂಗ್ರೆಸ್ ಮಾಡ್ತಿದೆ. ಈಗಾಗಲೇ ದೇಶದ ಜನ ಕಾಂಗ್ರೆಸ್ ಅವ್ರನ್ನ ತಿರಸ್ಕಾರ ಮಾಡಿದ್ದಾರೆ. ಕರ್ನಾಟಕದ ಜನ ಅವರನ್ನ ಪುರಸ್ಕಾರ ಮಾಡಲ್ಲ ಎಂದು ಹೇಳಿದರು.