Thursday, December 19, 2024

ನ್ಯೂಸ್‌​​ ಪೇಪರ್​​ನಲ್ಲಿ ಫಿಫಾ ವರ್ಲ್ಡ್​​​​​ಕಪ್​​​

ಯುರೋಪ್​ : ಕಲಾವಿದರು ತಮ್ಮ ಕೈ ಚಳಕ ಪ್ರದರ್ಶಿಸಿ ಜನತೆಯನ್ನು ನಿಬ್ಬೆರಗಾಗುವಂತೆ ಮಾಡ್ತಾರೆ. ತಮ್ಮ ವಿಶಿಷ್ಟ ಕಲೆಗಳಿಂದ ಜನಮನ ಸೆಳೆಯುತ್ತಿರ್ತಾರೆ.

ಇಲ್ಲೊಬ್ಬರು ಮಹಿಳೆ ಹಳೆ ನ್ಯೂಸ್​​​ ಪೇಪರ್ಸ್​​ ಬಳಸಿ ಸುಂದರ ಕಲಾಕೃತಿ ರಚನೆ ಮಾಡಿದ್ದಾರೆ. ಇಂದಿನ ನ್ಯೂಸ್​​​​​ ಪೇಪರ್​ ನಾಳೆಗೆ ಹಳೆಯದಾಗುತ್ತೆ. ಹೀಗೆ ಸಂಗ್ರಹವಾದ ದಿನಪತ್ರಿಕೆಯನ್ನು ಬಳಸಿ ಫಿಫಾ ವರ್ಲ್ಡ್​​​​​ ಕಪ್​​​ನ ಕಲಾಕೃತಿಯನ್ನು ನಿರ್ಮಿಸಿದ್ದಾರೆ.

ಮಹಾರಾಷ್ಟ್ರದ ಕಲಾವಿದೆ ಪ್ರಾಂಜಲಿ ಮುಲಿಕ್ ವಿಶ್ವಕಪ್ ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ. ಫಿಫಾ ಕಪ್​​ ಅನ್ನು ಸಾಮಾನ್ಯವಾಗಿ ವರ್ಲ್ಡ್​​​ ಕಪ್​​ ಎಂದು ಕರೆಯಲಾಗುತ್ತೆ. ಅಂತಾರಾಷ್ಟ್ರೀಯ ಅಸೋಸಿಯೇಷನ್​​​​ ಫುಟ್​​ಬಾಲ್ ಫಿಫಾ ವರ್ಲ್ಡ್​​​ ಕಪ್​​ ಆಯೋಜನೆ ಮಾಡುತ್ತೆ. 1930ರಲ್ಲಿ ಆರಂಭವಾದ ವರ್ಲ್ಡ್​​ಕಪ್ ಪ್ರತೀ 4 ವರ್ಷಗಳಿಗೊಮ್ಮೆ ನಡೆಯುತ್ತಿದೆ. ಕಸದಿಂದ ರಸ ನಿರ್ಮಾಣ ಮಾಡಿರುವ ಈಕೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರ್ತಿದೆ.

RELATED ARTICLES

Related Articles

TRENDING ARTICLES