Monday, May 13, 2024

ಗರ್ಭಪಾತ ಮಹಿಳೆಯ ಇಚ್ಛೆ ಎಂದ ಸುಪ್ರೀಂಕೋರ್ಟ್‌

ನವದೆಹಲಿ : ಗರ್ಭಪಾತ ನಿಯಮಾವಳಿ ಬದಲಿಸಿದ ಸುಪ್ರೀಂಕೋರ್ಟ್ ಅವಿವಾಹಿತ ಮಹಿಳೆಯರಿಗೂ ಗರ್ಭಪಾತಕ್ಕೆ ಅವಕಾಶ ನಿಡಲಾಗಿದೆ.

ಗರ್ಭಪಾತಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು, ಗರ್ಭಪಾತ ಮಹಿಳೆಯ ಇಚ್ಛೆ ಎಂದ ಸುಪ್ರೀಂಕೋರ್ಟ್‌. 24 ವಾರದೊಳಗೆ ಗರ್ಭಪಾತಕ್ಕೆ ಸುಪ್ರೀಂ ಅನುಮತಿ ನೀಡಿದ್ದು, ಮದುವೆ ಆಗದೇ ಇರುವವರಿಗೂ ಈ ನಿಯಮ ಅನ್ವಯವಾಗಲಿದೆ.

ಇನ್ನು, ಮದುವೆ ಬಳಿಕ ಇಷ್ಟವಿಲ್ಲದಿದ್ದರೆ ಅಬಾರ್ಷನ್‌ಗೆ ಅವಕಾಶ ನೀಡಿದ್ದು, ಗರ್ಭಪಾತದ ಬಗ್ಗೆ ಮಹಿಳೆಯೇ ನಿರ್ಧಾರ ಕೈಗೊಳ್ಳಬಹುದು. ಗರ್ಭಪಾತಕ್ಕೆ ಯಾವುದೇ 3ನೇ ವ್ಯಕ್ತಿಯ ಅನುಮತಿ ಬೇಕಿಲ್ಲ. ಗರ್ಭಪಾತದ ಬಗ್ಗೆ ಯಾವುದೇ FIR ಹಾಕುವಂತಿಲ್ಲ. ಎಲ್ಲಾ ಮಹಿಳೆಯರು ಸುರಕ್ಷಿತ ಗರ್ಭಪಾತಕ್ಕೆ ಅರ್ಹರು ಎಂದು ತೀರ್ಪು ನೀಡಿದೆ.

RELATED ARTICLES

Related Articles

TRENDING ARTICLES