Monday, December 23, 2024

ಸೇನಾ ಸಿಬ್ಬಂದಿಯೊಂದಿಗೆ ರಾಜನಾಥ್​ ಸಿಂಗ್​ ಸಂವಾದ

ಅಸ್ಸಾಂ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ದಿಂಜಾನ್ ಮಿಲಿಟರಿ ನಿಲ್ದಾಣದಲ್ಲಿ ಭಾರತೀಯ ಸೇನೆಯ DAO ವಿಭಾಗದ ಸಿಬ್ಬಂದಿಯನ್ನು ಭೇಟಿ ಮಾಡಿ ಸಂವಾದ ನಡೆಸಿದರು.

ಈ ವೇಳೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರೂ ಜೊತೆಗಿದ್ದರು. ಅಸ್ಸಾಂನ ದಿಂಜಾನ್ ಮಿಲಿಟರಿ ನಿಲ್ದಾಣಕ್ಕೆ ರಕ್ಷಣಾ ಸಚಿವರ ಆಗಮನದ ನಂತರ ಭಾರತೀಯ ಸೇನೆಯ ಸಿಬ್ಬಂದಿ ‘ಸಂದೇ ಆತೇ ಹೈ’ ಎಂದು ಹಾಡುತ್ತಾರೆ. ಈ ವೇಳೆ ಸೈನಿಕರ ಜೊತೆಗೆ ರಕ್ಷಣಾ ಸಚಿವರು ಮತ್ತು ಸೇನಾ ಮುಖ್ಯಸ್ಥರು ಕೂಡ ಹಾಡನ್ನು ಗುನುಗುತ್ತಿದ್ದರು.

ಇದಕ್ಕೂ ಮುನ್ನ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈಶಾನ್ಯ ರಾಜ್ಯಗಳಿಗೆ ಮೂರು ದಿನಗಳ ಭೇಟಿಗಾಗಿ ದಿಬ್ರುಗಢ ತಲುಪಿದರು. ಈ ಸಂದರ್ಭದಲ್ಲಿ, ಅವರು ಸಂಜೆ ದಿಂಜಾನ್‌ನಲ್ಲಿ ಭಾರತೀಯ ಸೇನೆಯ ಸೈನಿಕರೊಂದಿಗೆ ಚಹಾ ಸೇವಿಸಿದರು ಮತ್ತು ಅವರೊಂದಿಗೆ ಸಂವಾದ ನಡೆಸಿದರು.

RELATED ARTICLES

Related Articles

TRENDING ARTICLES