ಬೆಂಗಳೂರು : ಪಿಎಫ್‌ಐ ಹಾಗು ಅದ್ರ ಅಂಗ ಸಂಸ್ಥೆಗಳು ಸೇರಿ ಒಟ್ಟು 8 ಸಂಘಟನೆಗಳಿಗೆ ಬೀಗ ಹಾಕಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪರ-ವಿರೋಧ ಚರ್ಚೆಗಳಾಗುತ್ತಿವೆ. ಸರ್ಕಾರದ ನಾಯಕರು ಕೇಂದ್ರದ ನಿರ್ಧಾರ ಸಮರ್ಥನೆ ಮಾಡಿಕೊಳ್ಳುವ ಮೂಲಕ ಕೇಂದ್ರಕ್ಕೆ ಶಬ್ಬಾಸ್ ಗಿರಿ ನೀಡ್ತಿದ್ದಾರೆ. ಇತ್ತ, ವಿಪಕ್ಷ ನಾಯಕರು ಕಿಡಿಕಾರುತ್ತಿದ್ದಾರೆ.
ಪಿಎಫ್‌ಐ ಬ್ಯಾನ್‌ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಕಾನೂನು ಎಲ್ಲರಿಗೂ ಒಂದೇ. ನಾವು ವಿಧ್ವಂಸಕ ಕೃತ್ಯ ನಡೆಸುವರಿಗೆ ನಾವು ಯಾವತ್ತೂ ಸಾಥ್ ಕೊಡಲ್ಲ. ತಪ್ಪು ಮಾಡಿದ್ರೆ ಶಿಕ್ಷೆ ಅಗಲಿ. ಆದರೆ, ಅದೇ ರೀತಿ ಆರ್‌ಎಸ್‌ಎಸ್ ಸಹ ಬ್ಯಾನ್ ಅಗಬೇಕು.. ಅದು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡ್ತಿದೆ. ಹೀಗಾಗಿ ಅವರನ್ನೂ ಸಹ ಸರ್ಕಾರ ಬ್ಯಾನ್ ಮಾಡಬೇಕು ಎಂದು ಮಾಜಿ ಸಿಎಂ ಹೇಳಿದ್ರು.
ಬೆಕ್ಕಿನ ಕಣ್ಣಿನಿಂದ ಸಿದ್ದರಾಮಯ್ಯ ಇದನ್ನ ನೋಡಬಾರದು. ಆರ್‌ಎಸ್‌ಎಸ್ ಬಗ್ಗೆ ಹೇಳದೆ ಇದ್ರೆ ಅವರ ರಾಜಕೀಯ ನಡೆಯುವುದಿಲ್ಲ.. ರಾಜಕೀಯ ತೆವಲಿಗೆ ಸಿದ್ದರಾಮಯ್ಯ ಮಾತನಾಡೋದನ್ನ ಬಿಡಬೇಕೆಂದು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.
ಇನ್ನು ಪಿಎಫ್‌ಐ ನಿಷೇಧದ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಫುಲ್ ಗರಂ ಆಗಿದ್ರು. ವಿನಾಶ ಕಾಲೇ ವಿಪರೀತ ಬುದ್ದಿ ಅಂತಾರೆ. ಯಾವುದೇ ಸಂಘಟನೆ ಬ್ಯಾನ್ ಮಾಡುವಾಗ ಸಾಕ್ಷಿ ನೀಡಬೇಕು. ಐದು ವರ್ಷಕ್ಕೆ ಬ್ಯಾನ್ ಮಾಡಿದ್ದಾರೆ ಅಂತ ಹೇಳ್ತಾರೆ. ಇವರು ಅಡಲ್ಟ್ ಆಗಿಲ್ವಾ, ಐದು ವರ್ಷ ಆದ್ಮೇಲೆ ಬುದ್ದಿ ಬರುತ್ತಾ..? ಸರ್ಕಾರ ನಡೆಸೋರಿಗೆ ಬುದ್ದಿ ಇದ್ಯೋ ಇಲ್ವೋ ಗೊತ್ತಿಲ್ಲ ಅಂತ ಗರಂ ಆದ್ರು.
ಒಟ್ನಲ್ಲಿ ಪಿಎಫ್ಐ ಸೇರಿದಂತೆ 8 ಸಂಘಟನೆಗಳನ್ನ 5 ವರ್ಷಗಳ ಕಾಲ ನಿಷೇಧ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಆದೇಶದ ವಿರುದ್ದ ದೇಶಾದ್ಯಂತ ಪರ – ವಿರೋಧ ಜಟಾಪಟಿ ಶುರುವಾಗಿದೆ. ದೇಶ ವಿರೋಧಿ ವಿಧ್ವಂಸಕ ಕಾರಣಗಳನ್ನು ಕೊಟ್ಟು ಬ್ಯಾನ್ ಮಾಡಿದೆ ಕೇಂದ್ರ ಸರ್ಕಾರ. ಈ ನಿಷೇಧದ ಬಗ್ಗೆ ರಾಜ್ಯ ರಾಜಕೀಯದಲ್ಲೂ ವಾಕ್ಸಮರ ಶುರುವಾಗಿದ್ದು, ಮುಂದೆ ಯಾವ ರೀತಿ ಹೋರಾಟ ನಡೆಯುತ್ತೆ ಅಂತ ಕಾದುನೋಡಬೇಕಿದೆ.
ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು