Monday, December 23, 2024

‘ಗಜರಾಮ’ನಾದ ರಾಜ್​ವರ್ಧನ್​ಗೆ ಅಭಿಷೇಕ್ ಬೆನ್ನೆಲುಬು

ಕನ್ನಡ ನೆಲದ ಗಂಡುಗಲಿಯ ಕಥೆಯನ್ನು ಹೇಳಿದ್ದ ಬಿಚ್ಚುಗತ್ತಿ ಭರಮಣ್ಣ ನಾಯಕ ರಾಜ್​​​​ವರ್ಧನ್​​, ಐತಿಹಾಸಿಕ ಸಿನಿಮಾದಲ್ಲಿ ಕದನ ಕಲಿಯಾಗಿ ಹೋರಾಡಿದ್ದ ಸಾಹಸಿ ನಟ. ಯೆಸ್​​.. ಇದೀಗ ಮತ್ತೊಂದು ಆ್ಯಕ್ಷನ್​ ವೆಂಚರ್​​ ಕಥೆಯಲ್ಲಿ ಗಜರಾಮನಾಗಿ ರಾಜ್​ವರ್ಧನ್​​ ಎಂಟ್ರಿ ಕೊಡ್ತಿದ್ದಾರೆ. ಸದ್ಯ ಈ ಚಿತ್ರಕ್ಕೆ ಜ್ಯೂನಿಯರ್​​ ರೆಬೆಲ್​​​ ಸ್ಟಾರ್​​​​​ ಸಾಥ್​ ನೀಡಿದ್ದು, ಮಾಸ್ ಖದರ್​ನ ಮೋಷನ್ ಪೋಸ್ಟರ್​​​ ರಿಲೀಸ್​ ಮಾಡಿದ್ದಾರೆ.

  • ದುರ್ಗದ ಇತಿಹಾಸ ಹೇಳಿದ್ದ ನಾಯಕನ ಹೊಸ ಪ್ರಯತ್ನ..!

ಬಿಚ್ಚುಗತ್ತಿ ಸಿನಿಮಾದ ಮೂಲಕ ಕತ್ತಿ ಜಳಪಿಸಿದ್ದ ಹ್ಯಾಂಡ್​​​ಸಮ್​ ನಟ ರಾಜ್​​​​ವರ್ಧನ್​​​. ದುರ್ಗದ ಕಲ್ಲಿನ ಕೋಟೆಯ ಐತಿಹಾಸಿಕ ಕಥೆ ಹೇಳುವ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಅಜಾನುಬಾಹು ಪ್ರತಿಭೆ. ಹಾಸ್ಯ ಸುಧೆ ಹರಿಸಿದ ಸ್ಯಾಂಡಲ್​ವುಡ್​​ ಕಲಾವಿದ ಡಿಂಗ್ರಿ ನಾಗರಾಜ್​ ಅವ್ರ ಸುಪುತ್ರ ರಾಜ್​​​ವರ್ಧನ್​ ಮಾಸ್​​ ಅವತಾರದಲ್ಲಿ ಅಬ್ಬರಿಸಲಿದ್ದಾರೆ. ಚಿತ್ರಕ್ಕೆ ಗಜರಾಮ ಟೈಟಲ್​​ ಇಡಲಾಗಿದ್ದು ಇಂದು ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ.

ಕಂಠೀರವ ಸ್ಟುಡಿಯೋದಲ್ಲಿ ಗಜರಾಮ ಚಿತ್ರಕ್ಕೆ ಚಾಲನೆ ನೀಡಿದ ಯಂಗ್​ ರೆಬೆಲ್​​ ಸ್ಟಾರ್​​ ಅಭಿಶೇಕ್​ ಅಂಬರೀಶ್​​ ಚಿತ್ರಕ್ಕೆ ಮನಸಾರೆ ಶುಭ ಹಾರೈಸಿದ್ದಾರೆ. ಪಕ್ಕಾ ಆ್ಯಕ್ಷನ್​​, ಲವ್​​​​, ಅಂಡ್​ ಎಮೋಷನಲ್​​ ಕಂಟೆಂಟ್​ ಇರೋ ಸಿನಿಮಾ ಇದಾಗಿದ್ದು ಸದ್ಯದಲ್ಲೇ ಚಿತ್ರದ ಶೂಟಿಂಗ್​ ಶುರುವಾಗಲಿದೆ. ಕ್ಲಾಪ್​ ಮಾಡಿ ಮಾತನಾಡಿದ ಅಭಿಶೇಕ್​, ನಮ್ಮ ತಂದೆಯೂ ಇದೇ ಹೆಸ್ರಿನಲ್ಲಿ ಸಿನಿಮಾ ಮಾಡಿದ್ರು. ಸಿಕ್ಸ್​ ಫೂಟ್​ ಹೀರೋ ಕ್ಲಬ್​​ನಲ್ಲಿ ರಾಜು ಕೂಡ ಇದಾನೆ ಅನ್ನೋದೆ ಖುಷಿ ಎಂದು ಕಿಚಾಯಿಸಿದ್ರು.

  • ಹರಿ ಕಥೆ ಮುಗಿಸಿ ಹೊಸ ಕಥೆ ಹೇಳಲು ಹೊರಟ ತಪಸ್ವಿನಿ
  • ಸಂಗೀತ ಮಾಂತ್ರಿಕ ಮನೋಮೂರ್ತಿ ಪಾರ್ಟಿ ಸಾಂಗ್​​..!

ಶಿಷ್ಯ, ಮಾಗಡಿ ಚಿತ್ರಗಳ ಮೂಲಕ ಸೆನ್ಷೇಷನ್​ ಕ್ರಿಯೇಟ್​ ಮಾಡಿದ್ದ ಚಂದನವನದ ಕಲಾವಿದ ದೀಪಕ್​ ಗಜರಾಮನ ಟೀಮ್​​ ಸೇರಿಕೊಂಡಿದ್ದಾರೆ. ಇದೊಂದು ಪೈಲ್ವಾನ್​ ಓರಿಯೆಂಟೆಡ್​ ಕಥೆಯಾಗಿರೋದ್ರಿಂದ ಘಟಾನುಘಟಿಗಳ ತಾರಾಗಣದಲ್ಲಿ ಸಿನಿಮಾ ಸೌಂಡ್​ ಮಾಡಲಿದೆ. ಮೊದಲ ಬಾರಿಗೆ ಮನೋಮೂರ್ತಿ ಪಾರ್ಟಿ ಸಾಂಗ್​ಗೆ ಮ್ಯೂಸಿಕ್​ ಕಂಪೋಸ್​​ ಮಾಡ್ತಿದ್ದು ಸಖತ್​ ಚಾಲೆಂಜಿಂಗ್​ ಆಗಿದೆ.

ಪವರ್​ಫುಲ್​ ಕ್ಯಾರೆಕ್ಟರ್​​ನಲ್ಲಿ ರಾಜ್​​​​ವರ್ಧನ್​​ ಮಿಂಚ್ತಿದ್ದು, ರೌಡಿಸಂ ಪಾತಕ ಲೋಕದ ಘರ್ಜನೆ ಕೂಡ ಇರಲಿದೆ. ಸುನೀಲ್​​ ಕುಮಾರ್​ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಗಜರಾಜ ಚಿತ್ರದ ಮೋಷನ್​ ಪೋಸ್ಟರ್​​ ಕೂಡ ಪ್ರಾಮಿಸಿಂಗ್​​ ಆಗಿದೆ. ಲೈಫ್​ ಲೈನ್ಸ್​​ ಫಿಲ್ಮ್ಸ್​​​​ ಬ್ಯಾನರ್​​ ಅಡಿಯಲ್ಲಿ ನರಸಿಂಹ ಮೂರ್ತಿ ನಿರ್ಮಾಣದಲ್ಲಿ ರಿಚ್​ ಆಗಿ ಗಜರಾಜನ ವರ್ಚಸ್ಸು ರಾರಾಜಿಸಲಿದೆ. ಜತೆಗೆ ಮಲ್ಲಿಕಾರ್ಜುನ ಕಾಶಿ ಹಾಗೂ ಕ್ಸೇವಿಯರ್​ ಸಹ ನಿರ್ಮಾಪಕರಾಗಿ ಸಾಥ್​ ನೀಡಿದ್ದಾರೆ.

ಅಕ್ಟೋಬರ್​ ಮೊದಲ ವಾರದಲ್ಲಿ ಫಸ್ಟ್​ ಶೆಡ್ಯೂಲ್​ ಶುರುವಾಗಲಿದ್ದು ಬಿಗ್​ ಸ್ಟಾರ್​ ಕಾಸ್ಟಿಂಗ್​ ಕೂಡ ಇರಲಿದೆ. ಈಗಾಗ್ಲೇ ಪ್ರಣಯಂ, ಹಿರಣ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಾಜವರ್ಧನ್​ ಬ್ಯುಸಿಯೆಸ್ಟ್ ನಟರಲ್ಲೊಬ್ಬರಾಗಿದ್ದಾರೆ. ಕೆ.ಎಸ್​ ಚಂದ್ರಶೇಖರ್​ ಕ್ಯಾಮೆರಾ ಕಣ್ಣಲ್ಲಿ ಮಾಸ್​ ಅಂಡ್​ ಕ್ಲಾಸ್​ ಸೀನ್​ಗಳು ನಯನ ಮನೋಹರವಾಗಿ ಮೂಡಿ ಬರಲಿವೆ. ಸದ್ಯ ಫಸ್ಟ್​ ಲುಕ್​ ಮೂಲಕ ರಗಡ್​​ ಲುಕ್​ನಲ್ಲಿ ಅಬ್ಬರಿಸ್ತಿರೋ ಗಜರಾಮ ಚಿತ್ರದ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ ಪವರ್​ ಟಿವಿ

RELATED ARTICLES

Related Articles

TRENDING ARTICLES