Monday, January 6, 2025

RSS ಒಂದು ದೇಶಭಕ್ತ ಸಂಘಟನೆ : ಸಿ.ಟಿ.‌ರವಿ

ಹಾಸನ: ದೇಶಭಕ್ತ ಮತ್ತು ದೇಶದ್ರೋಹಿಗೆ ವ್ಯತ್ಯಾಸ ಗೊತ್ತಿಲ್ಲದೇ ಇರುವವರು ಹಿಂಗೆ ಮಾತಾಡೋದಕ್ಕೆ ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.‌ರವಿ ವಾಗ್ದಾಳಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿಯ ಜೊತೆ ದೇಶಭಕ್ತರನ್ನು ಹೋಲಿಸೋದು ಅದು ಒಂದು ಅಕ್ಷಮ್ಯ ಅಪರಾಧ. RSS ಒಂದು ದೇಶಭಕ್ತ ಸಂಘಟನೆ. ದೇಶ ಕಟ್ಟುವ ಕಾರ್ಯ, ಭಾರತ ಜಗದ್ಗುರು ಆಗಬೇಕು ಅಂತಾ ಭಯಸೋದು RSS, ಭಾರತ.. ಭಾರತವಾಗಿ ಉಳಿಯಬೇಕು ಅಂತಾ ಭಯಸೋದು RSS ಭಾರತವನ್ನ ಮೊಘಲ್ ಸ್ಥಾನ್ ಮಾಡಿ, ಹಿಂದೂಗಳನ್ನೆಲ್ಲಾ ಮತಾಂತರ ಮಾಡಬೇಕು ಸರ್ವನಾಶ ಮಾಡಬೇಕು ಅಂತಾ ಬಯಸೋದು PFI ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಈಗ ಅವರು RSS ನ ಬೈದ್ರೆ ಓಟ್ ಸಿಗುತ್ತೆ ಅನ್ನೋ ದುರಾಸೆ. ಈಗ ಇವರಿಗೂ PFI ನವರಿಗೂ ವ್ಯತ್ಯಾಸ ಏನು. PFI ಕೂಡಾ RSSನೇ ಟಾರ್ಗೆಟ್ ಮಾಡುತ್ತೆ. ಕಾಂಗ್ರೆಸ್​ನವರೂ RSSನ ಟಾರ್ಗೆಟ್ ಮಾಡುತ್ತಾರೆ. ಆದರೆ ಇವರಿಬ್ಬರ ನಡುವೆ ಏನೋ ಒಳ ಹೊಂದಾಣಿಕೆ ನಡೆದುಕೊಂಡಿರೋ ಸಾಧ್ಯತೆ ಇದೆ. ಮೊಘಲ್ ಸ್ಥಾನ್ ಮಾಡೋದಕ್ಕೆ ನೀವು ನಮಗೆ ಸಹಾಯ‌ ಮಾಡಿ. ನಿಮಗೆ ನಾವು ಓಟ್ ಹಾಕ್ತೀವಿ. ಅನ್ನುವಂತಹ ಏನೋ ಒಳ‌ಒಪ್ಪಂದ ನಡೆದಿರುವ ಸಾಧ್ಯತೆಯಿದೆ. ಈ ಅಧಿಕಾರದ ದುರಾಸೆಗೆ ಹಿಂದೆ ಭಾರತವನ್ನ ವಿಭಜನೆ ಮಾಡಿದ್ರು, ಅಧಿಕಾರದ ದುರಾಸೆಗೆ ಜಿನ್ನಾ ಷರತ್ತಿಗೆ ಇವರು ಒಪ್ಪಿಗೆ ಸೂಚಿಸಿದ್ರು , ಇವತ್ತಿನ ಕಾಂಗ್ರೆಸ್ PFI ಬೆದರಿಕೆಗೆ PFI ಜೊತೆಗೆ ಕೈ ಜೋಡಿಸಿದ್ದಾರೆ ಅಂತಾ ನನಗೆ ಅನುಮಾನ ಬರ್ತಾ ಇದೆ ಎಂದರು.

RELATED ARTICLES

Related Articles

TRENDING ARTICLES