Monday, December 23, 2024

ಬಾಂಬ್‌ ಸ್ಫೋಟಕ್ಕೆ ಬೆಚ್ಚಿಬಿದ್ದ ಜಮ್ಮು-ಕಾಶ್ಮೀರ

ಜಮ್ಮು-ಕಾಶ್ಮೀರ : ಕಾಶ್ಮಿರದಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಮುಂಜಾನೆಯ ನಡುವೆ 8 ಗಂಟೆಗಳ ಅಂತರದಲ್ಲಿ ಎರಡು ನಿಗೂಢ ಬಾಂಬ್‌ ಸ್ಫೋಟ ಪ್ರಕರಣಗಳು ವರದಿಯಾಗಿವೆ. ಬುಧವಾರ ರಾತ್ರಿ 10:45 ರ ಸುಮಾರಿಗೆ ಡೊಮೈಲ್ ಚೌಕ್‌ನಲ್ಲಿ ಬಸ್‌ನಲ್ಲಿ ಸ್ಪೋಟ ಸಂಭವಿಸಿದ್ದು ಈ ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ.

ಈ ಪ್ರಕರಣ ನಡೆದ 8 ಗಂಟೆಗಳ ಅಂತರದಲ್ಲಿ ಇದೇ ರೀತಿಯ ಇನ್ನೊಂದು ಸ್ಫೋಟ ಸಂಭವಿಸಿದ್ದು ಕಾಶ್ಮೀರದ ಉಧಂಪುರ ಜಿಲ್ಲೆಯ ಹಳೆಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್‌ನಲ್ಲಿ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಗಾಯಗಳು ಅಥವಾ ಸಾವುನೋವುಗಳು ವರದಿಯಾಗಿಲ್ಲ. J&K ಪೊಲೀಸರು ಮತ್ತು ಇತರ ಭದ್ರತಾ ಪಡೆಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ರಾತ್ರಿ ಸ್ಫೋಟಗೊಂಡ ಸ್ಥಳದಿಂದ ಕೇವಲ 4 ಕಿಮೀ ದೂರದಲ್ಲಿ ಎರಡನೇ ಸ್ಫೋಟ ಸಂಭವಿಸಿದೆ ಎನ್ನಲಾಗಿದ್ದು 10:30 ರ ಸುಮಾರಿಗೆ ಸ್ಫೋಟ ಸಂಭವಿಸಿದಾಗ ಖಾಲಿ ಬಸ್ ಡೊಮೈಲ್ ಚೌಕ್‌ನ ಪೆಟ್ರೋಲ್ ಪಂಪ್‌ನ ಬಳಿ ತನ್ನ ದಿನನಿತ್ಯದ ಸೇವೆಯ ನಂತರ ನಿಂತಿತ್ತು ಎಂದು ಮೂಲಗಳು ವರದಿ ಮಾಡಿವೆ. ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES