Sunday, May 11, 2025

PFI & SDPI ಕಾರ್ಯಕರ್ತರ ಮನೆ ಮೇಲೆ ದಾಳಿ

ಚಿಕ್ಕಮಗಳೂರು :  ನಿಷೇಧಿತ PFI ಹಾಗೂ SDPI ಕಾರ್ಯಕರ್ತರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಜಿಲ್ಲಾಧಿಕಾರಿಗಳ ಸರ್ಚ್ ವಾರೆಂಟ್ ಆದೇಶದ ಮೇಲೆ ಅಧಿಕಾರಿಗಳಿಂದ ದಾಳಿ ನಡೆದಿದೆ. ಆಲ್ದೂರಿನ ವಗಾರ್ ರಸ್ತೆಯಲ್ಲಿ ಆರೀಫ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ರು. ಚಿಕ್ಕಮಗಳೂರು ವಿಜಯಪುರದಲ್ಲಿ ನಿಷೇಧಿತ PFI ಜಿಲ್ಲಾಧ್ಯಕ್ಷ ಚಾಂದ್ ಬಾಷಾ, SDPI ಜಿಲ್ಲಾಧ್ಯಕ್ಷ ಗೌಸ್ ಮುನೀರ್ ಮನೆ ಮೇಲೂ ದಾಳಿ ನಡೆದಿದೆ.

ಇನ್ನು, ಈ ವೇಳೆ ಚಾಂದ್​​ ಪಾಷಾ ಪೊಲೀಸರ ಜೊತೆ ವಾಗ್ವಾದಕ್ಕಿಳಿದ್ರು. ಬಿಗಿ ಪೊಲೀಸ್ ಬಂದೋಬಸ್ತ್​​​ನಲ್ಲಿ PFI ಹಾಗೂ SDPI ಮುಖಂಡರ ಮನೆಗಳ ಮೇಲೆ ದಾಳಿಯಾಗಿದೆ. ನಿಷೇಧಿತ PFI ಚಟುವಟಿಕೆ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕ್ತಿದ್ದಾರೆ. ನಗರದ ಮಲ್ಲಂದೂರು ರಸ್ತೆಯಲ್ಲಿರುವ SDPI ಜಿಲ್ಲಾ ಕಚೇರಿ ಮೇಲೂ ಅಧಿಕಾರಿಗಳು ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES