Monday, December 23, 2024

ವ್ಯಕ್ತಿಯ ಹೊಟ್ಟೆಯಲ್ಲಿ 63 ಸ್ಪೂನ್​​​ಗಳು​​​ ಪತ್ತೆ..!

ಉತ್ತರ ಪ್ರದೇಶ:  ಮುಜಾಫರ್‌ ನಗರದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಓರ್ವ ವ್ಯಕ್ತಿಯ ಹೊಟ್ಟೆಯಲ್ಲಿ 63 ಸ್ಟೀಲ್​​​ ಸ್ಪೂನ್​​ಗಳಿದ್ದು, ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ರೋಗಿ ವಿಜಯ್ ಎಂಬುವವ ಮಾದಕ ವ್ಯಸನಿಯಾಗಿದ್ದು, ಡಿ-ಅಡಿಕ್ಷನ್ ಸೆಂಟರ್‌ಗೆ ದಾಖಲಾಗಿದ್ದರು. ವೈದ್ಯರು ಕೇಳಿದಾಗ, ವಿಜಯ್ ಅವರು ಒಂದು ವರ್ಷದಿಂದ ಚಮಚಗಳನ್ನು ತಿನ್ನುತ್ತಿದ್ದೆ ಎಂದು ಹೇಳಿದ್ದಾನೆ.

ಇನ್ನು,  ಕೇಂದ್ರದ ಸಿಬ್ಬಂದಿ ವಿಜಯ್ ಅವರಿಗೆ ಬಲವಂತವಾಗಿ ಚಮಚ ತಿನ್ನಿಸಿದ್ದಾರೆ ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ. ಇನ್ನೂ ದೂರು ದಾಖಲಾಗಿಲ್ಲ. 32 ವರ್ಷದ ಅವರ ಆರೋಗ್ಯ ಹದಗೆಟ್ಟ ನಂತರ ಆಸ್ಪತ್ರೆಗೆ ಕರೆತರಲಾಯಿತು. ಆತನಿಗೆ ಶಸ್ತ್ರಚಿಕಿತ್ಸೆ ನಡೆಸಿದಾಗ ಆತನ ಹೊಟ್ಟೆಯಲ್ಲಿ 63 ಸ್ಟೀಲ್ ಸ್ಪೂನ್‌ಗಳು ಪತ್ತೆಯಾಗಿವೆ. ಸುಮಾರು 2 ಗಂಟೆಗಳ ಕಾಲ ಆಪರೇಷನ್​​ ನಡೆಸಿ, ಚಮಚಗಳನ್ನು ಹೊರತೆಗೆದಿದ್ದಾರೆ. ಸದ್ಯ ರೋಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರೋಗಿಯು 1 ವರ್ಷದಿಂದ ಚಮಚಗಳನ್ನು ತಿನ್ನುತ್ತಿದ್ದಾನೆ ಎಂದು ಡಾ.ರಾಕೇಶ್ ಖುರಾನಾ ತಿಳಿಸಿದರು.

RELATED ARTICLES

Related Articles

TRENDING ARTICLES