ಬಾಗಲಕೋಟೆ : PFI ಬ್ಯಾನ್ ಮಾಡಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅಭಿನಂದನೆ ಸಲ್ಲಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವರಾತ್ರಿ ದಿನಗಳಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಆನಂದ & ಹರ್ಷವಾಗಿದೆ. ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಅವಶ್ಯಕತೆ ಇತ್ತು. ದೇಶದ ಗಂಡಾಂತರ ತಡೆಯುವ ಕೆಲಸವನ್ನು ಸರ್ಕಾರ ಮಾಡಿದೆ. ಮುಸ್ಲಿಂ ಸಮಾಜ ಇದರಿಂದ ಪಾಠ ಕಲಿಯಬೇಕಿದೆ ಎಂದರು.
ಇನ್ನು, ಮುಸ್ಲಿಂ ಹಿರಿಯರು ತಮ್ಮ ಯುವಕರು ಯಾವ ಹಾದಿ ತುಳಿಯುತ್ತಿದ್ದಾರೆಂದು ತಿಳಿಯಬೇಕಿದೆ. ದೇಶದ್ರೋಹ ಚಟುವಟಿಕೆಯಲ್ಲಿ ತೊಡಗುತ್ತಿದ್ದರೆ ಪೋಲಿಸರಿಗೆ ತಿಳಿಸಬೇಕು. ಈ ದೇಶದಲ್ಲಿ ಹುಟ್ಟಿ, ಇಲ್ಲಿಯ ಅನ್ನ ತಿಂದು, ಈ ದೇಶಕ್ಕೆ ಬದ್ಧರಾಗಿರಬೇಕು. ಪಾಕಿಸ್ತಾನದಂತೆ ಮುಸ್ಲಿಂ ರಾಷ್ಟ್ರ ಮಾಡುವ ವಿಕೃತ ಮನಸ್ಸನ್ನು ಬಿಡಬೇಕು. ಇದನ್ನು ಮುಸ್ಲಿಂ ಸಮಾಜದ ಮುಖಂಡರು ತಿಳಿಹೇಳುವಂತಾಗಬೇಕು. PFI ಬ್ಯಾನ್ ಮಾಡಿದ್ದಕ್ಕೆ ಸಾವಿರ ಸಾವಿರ ಸಾವಿರ ಪ್ರಣಾಮಗಳು, ಧನ್ಯವಾದ ಎಂದು ಹೇಳಿದರು.