Wednesday, January 22, 2025

ಅರ್ಷದೀಪ್ ಸಿಂಗ್ ಬೌಲಿಂಗ್​ ಕಮಾಲ್​; ಭಾರತಕ್ಕೆ 107 ರನ್​ ಟಾರ್ಗೆಟ್​​

ಕೇರಳ: ತಿರುವನಂತಪುರಂ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 106 ರನ್​ ಕಲೆಹಾಕಿದೆ.

ಮೊದಲ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಅತೀಥೆಯ ದಕ್ಷಿಣ ಆಫ್ರಿಕಾ ತಂಡ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 106 ರನ್​ ಕಲೆಹಾಕಿತು.

ಒಂದು ಸಂದರ್ಭದಲ್ಲಿ 9 ರನ್​ಗೆ 5 ವಿಕೆಟ್​ ಕಳೆದುಕೊಂಡಿದ್ದ ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡವನ್ನ ಕೇಶವ ಮಹಾರಾಜ್ ಹಾಗೂ ಐಡೆನ್ ಮಾಕ್ರಂ ಜತೆ ಆಟದಿಂದ ಉತ್ತಮ ರನ್​ ಕಲೆಹಾಕುವಲ್ಲಿ ಸಶಕ್ತವಾಯಿತು. ಇನ್ನು ಭಾರತದ ಪರ ಅರ್ಷದೀಪ್ ಸಿಂಗ್ 3, ಹರ್ಷಲ್ ಪಟೇಲ್ 2, ದೀಪಕ್ ಚಹಾರ್ 2, ಅಕ್ಷರ್​ ಪಟೇಲ್​ 1 ವಿಕೆಟ್​ ಪಡೆದು ಮಿಂಚಿದರು. ಇನ್ನು ಸೆಕೆಂಡ್​ ಬ್ಯಾಟಿಂಗ್ ಕಾಯ್ದುಕೊಂಡ​ ಭಾರತ ತಂಡ ಗೆಲುವಿಗೆ 117 ರನ್​ ಕಲೆ ಹಾಕಬೇಕಿದೆ.

RELATED ARTICLES

Related Articles

TRENDING ARTICLES