Wednesday, January 22, 2025

ಕಾಂಗ್ರೆಸ್​​ನ ಭಾರತ್​​ ಜೋಡೋ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ರಾಮನಗರ : ಭಾರತ ಜೋಡೊ ಮುಖಾಂತರ ಭಾರತವನ್ನು ಒಗ್ಗೂಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಆದ್ರೆ ಯಾವಾಗ ಈ ದೇಶ ಚಿದ್ರ ಆಗಿದೆ ಅಂತಾ ಗೊತ್ತಿಲ್ಲ ಎಂದು ಕಾಂಗ್ರೆಸ್​​​ ಜೋಡೋ ಯಾತ್ರೆ ವಿರುದ್ಧ ಮಾಜಿ ಸಿಎಂ H.D. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ನಗರದ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ಮಾತನಾಡಿದ ಅವರು, ನಮಗೆ ಬೇಕಾಗಿರೋದು ಜನರ ಬದುಕು, ನಮ್ಮ ಜನರ ಬದುಕನ್ನು ಕಟ್ಟಿಕೊಡಬೇಕು. ಕಳೆದ ಮಳೆಯ ಅನಾಹುತದಿಂದಾಗಿ ನಮ್ಮ ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡಬೇಕು. ಇವರು ಕೊಡುವ ಪರಿಹಾರದಿಂದ ರೈತರು ಬದುಕಲು ಸಾಧ್ಯಾನಾ ಎಂದ್ರು. ಸರ್ಕಾರ ರೈತರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಬೇಕು ಎಂದರು.

ಇನ್ನು, ರಾಜ್ಯದಲ್ಲಿ ಹಲವು ಸಮಸ್ಯೆಗಳಿವೆ ಅದರ ವಿರುದ್ದ ನಾವು ಹೋರಾಡಬೇಕು. ಕಾಂಗ್ರೆಸ್​​​ನವರ ಭಾರತ್ ಜೋಡೊ, ಪೇ ಸಿಎಂ ಮುಖಾಂತರ ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯಾನಾ ಎಂದು ಹೇಳಿದರು.

RELATED ARTICLES

Related Articles

TRENDING ARTICLES