Monday, December 23, 2024

ಗೆಲುವನ್ನ ಪುನೀತ್​ಗೆ ಸಮರ್ಪಿಸಿದ ಪುಟ್ಟ ಪೋರಿ

ಯೂರೋಪ್​ನ ಜಾರ್ಜಿಯಾದಲ್ಲಿ ನಡೆದ ಎಫ್​ಐಡಿಇ ವಿಶ್ವ ಕೆಡೆಟ್ಸ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಎ ಚಾರ್ವಿ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. 8 ವರ್ಷದೊಳಗಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಾಸನದ ಪುಟ್ಟ ಪೋರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪಾತಾಕೆಯನ್ನು ಹಾರಿಸಿದರು.

ವಿಶೇಷ ಎಂದರೆ ತನ್ನ ಈ ವಿಶ್ವ ಚಾಂಪಿಯನ್ ಗೆಲುವನ್ನು ಚಾರ್ವಿ ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರಿಗೆ ಅರ್ಪಿಸಿದ್ದಾರೆ. ಅಪ್ಪಟ ‘ಅಪ್ಪು’ ಅಭಿಮಾನಿಯಾಗಿರುವ ಹಾಸನದ ಶ್ರವಣಬೆಳಗೊಳ ಮೂಲದ‌ ಚಾರ್ವಿ ತನ್ನ ಗೆಲುವನ್ನು ತನ್ನ ನೆಚ್ಚಿನ ನಟ ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್ ಸಮರ್ಪಿಸುವುದಾಗಿ ತಿಳಿಸಿದ್ದಾರೆ.

ಈ ಮೂಲಕ ತನ್ನ ಆಲ್​ಟೈಮ್ ಫೇವರಿಟ್ ನಟನಿಗೆ ವಿಶ್ವ ಚಾಂಪಿಯನ್ ಪಟ್ಟದೊಂದಿಗೆ ಗೌರವ ಸೂಚಿಸಿದ್ದಾರೆ. ಈ ಸ್ಪರ್ಧೆಯಲ್ಲಿ 8 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚಾರ್ವಿ 11 ಸುತ್ತುಗಳಿಂದ 9.5 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರು. ಚಾರ್ವಿ ಕೊನೆಯ ಮೂರು ಸುತ್ತುಗಳಲ್ಲಿ ಎರಡನೇ ಸ್ಥಾನ ಗಳಿಸಿದ ಬೋಧನ ಶಿವಾನಂದನ್ ಅವರನ್ನು ಫಾಲೋ ಮಾಡಿದ್ದರು.

ಆದರೆ ಇಬ್ಬರೂ 9.5 ಅಂಕಗಳೊಂದಿಗೆ ಚದುರಂಗದಾಟವನ್ನು ಕೊನೆಗೊಳಿಸಿದ್ದರು. ಆ ನಂತರ ಉತ್ತಮ ಟೈ-ಬ್ರೇಕ್ ಸ್ಕೋರ್​ನಲ್ಲಿ ಬೋಧನ ಅವರನ್ನು ಹಿಂದಿಕ್ಕಿ ಚಾರ್ವಿ ಲಿಟಲ್ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

RELATED ARTICLES

Related Articles

TRENDING ARTICLES