Wednesday, January 22, 2025

ಮೋದಿ ಹಾಗೂ ಅಮಿತ್ ಶಾ ನಾಯಕತ್ವದಲ್ಲಿ PFI ಬ್ಯಾನ್ ಆಗಿದೆ : ಸಿಎಂ ಬೊಮ್ಮಾಯಿ

ಬೆಂಗಳೂರು : ಮೋದಿ ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ಪಿ ಎಫ್ ಬ್ಯಾನ್ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರು ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ಶಾಂತಿ ಸೌಹಾರ್ತೆ ಬಗ್ಗೆ ಅವರಿಗೆ ನಂಬಿಕೆ ಇರಲಿಲ್ಲ. ವಿದೇಶಗಳಿಂದ ಆಜ್ಞೆ ಪಡೆದು ಅವರ ರಿಮೋಟ್ ಕಂಟ್ರೋಲ್ ಆಗಿದ್ದರು. ಈ ಸಂಘಟನೆಯ ಕೆಲವರು ಗಡಿ ಆಚೆಗೆ ಹೋಗಿ ಟ್ರೈನಿಂಗ್ ಪಡೆದುಕೊಂಡು ಬಂದಿದ್ದಾರೆ. ಕೆಲವರು ಹೊರದೇಶದಿಂದ ಇಲ್ಲಿ ಆಪರೇಟ್ ಮಾಡುತ್ತಿದ್ದಂತ ಸಂಸ್ಥೆ ಇದು ಹಲವಾರು ವರ್ಷಗಳಿಂದ ಹಲವಾರು ಕೇಸ್ ಗಳಲ್ಲಿ ಇವರು ಭಾಗಿಯಾಗಿದ್ದರು ಎಂದರು.

ಇನ್ನು, ಕರ್ನಾಟಕದಲ್ಲಿ ವಿದ್ವಾಂಸಕ ಕೃತ್ಯಗಳನ್ನು ನಡೆಸಿರುವುದು ಈಗಾಗಲೇ ಗೊತ್ತಾಗಿದೆ. ಈ ದೇಶದ್ರೋಹಿ ಸಂಸ್ಥೆಯನ್ನು ಬ್ಯಾನ್ ಮಾಡಬೇಕೆನ್ನುವುದು ಜನಸಾಮಾನ್ಯರ ಒತ್ತಡವಾಗಿತ್ತು. ವಿರೋಧ ಪಕ್ಷ ಕೂಡ ಪಿ ಎಫ್ ಐ ಬ್ಯಾನ್ ಆಗಬೇಕು ಎಂದು ಹೇಳಿಕೆ ನೀಡಿದರು. ಮೋದಿ ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ಪಿ ಎಫ್ ಬ್ಯಾನ್ ಆಗಿದೆ. ಇಂತಹ ಬ್ಯಾನ್ ಆಗಿರುವ ಸಂಘಟನೆ ಜೊತೆ ಯಾರು ಸಂಬಂಧ ಇಟ್ಟುಕೊಳ್ಳಬಾರದು ಎಂದು ಹೇಳಿದರು.

RELATED ARTICLES

Related Articles

TRENDING ARTICLES