Monday, December 23, 2024

ಅಪ್ಪು ಕಟ್ಟಾಭಿಮಾನಿ ಬಾಂಡ್​ ರವಿ ಖದರ್​ಗೆ ಎಲ್ರೂ ಫಿದಾ

ರತ್ನನ್ ಪ್ರಪಂಚ ಚಿತ್ರದಿಂದ ಲೈಮ್​ಲೈಟ್​ಗೆ ಬಂದ ಉಡಾಳ್ ಬಾಬು, ಇದೀಗ ರೀಲ್ ಹಾಗೂ ರಿಯಲ್ ಲೈಫ್​ನಲ್ಲಿ ರಾಜರತ್ನ ಅಪ್ಪು ಅಭಿಮಾನಿಯಾಗಿ ಮಿಂಚು ಹರಿಸ್ತಿದ್ದಾರೆ. ಬಾಂಡ್ ರವಿಯ ಮಾಸ್ ಖದರ್​ಗೆ ಇಂಡಸ್ಟ್ರಿಯೇ ಕ್ಲೀನ್ ಬೋಲ್ಡ್ ಆಗಿದೆ. ಇಷ್ಟಕ್ಕೂ ನಟಸಾರ್ವಭೌಮನ ಬಗ್ಗೆ ಬಾಂಡ್ ರವಿ ಹೇಳಿದ್ದೇನು ಅಂತೀರಾ..? ನೀವೇ ಓದಿ.

  • ಎದೆ ಕೊಟ್ಟು ಎದೆ ಸೀಳೋಕೆ ಆಖಾಡಕ್ಕೆ ಇಳಿದ ಜಗಜಟ್ಟಿ..!

ಮೈ ಬೆವರಿಳಿಸೋ ಆ್ಯಕ್ಷನ್​ ಸೀನ್​ಗಳು, ಬೆಚ್ಚಿ ಬೆದರಿಸೋ ಖಡಕ್​ ಡೈಲಾಗ್​ಗಳು. ಯೆಸ್​​. ಇದು ಬಾಂಡ್​​ ರವಿ ಸಿನಿಮಾದ ಮೇನ್​ ಹೈಲೈಟ್ಸ್​. ಒಂದು ನಿಮಿಷ 56 ಸೆಕೆಂಡುಗಳ ಕಾಲ ನಿಮ್ಮ ಅಟೆನ್ಷನ್​​ ಅತ್ತಿತ್ತ ಹೋಗದಂತೆ ಮೈ ಜುಮ್ಮೆನ್ನಿಸಿದ ಪವರ್​ಫುಲ್​​ ಟೀಸರ್​ ಬಾಂಡ್​​ ರವಿ ಚಿತ್ರದ್ದು. ಅಣ್ಣಾ ಬಾಂಡ್​​ ಚಿತ್ರದಲ್ಲಿ ಬಾಂಡ್​ ರವಿ ಹೆಸರಿನ ಮೇಲೆ ಅಪ್ಪು ಅಭಿಮಾನಿಯಾಗಿ ನಟ ಪ್ರಮೋದ್​ ಅಬ್ಬರಿಸೋಕೆ ಸಜ್ಜಾಗಿದ್ದಾರೆ.

ರತ್ನನ್​ ಪ್ರಪಂಚ ಹಿಟ್ ಸಿನಿಮಾ ಮೂಲಕ ಚಿತ್ರರಸಿಕರ ಹೃದಯದಲ್ಲಿ ಅಳಿಸದ ಟ್ಯಾಟು ಆಗಿ ಉಳಿದುಕೊಂಡ ಪ್ರಾಮಿಸಿಂಗ್ ಆ್ಯಕ್ಟರ್​​​ ಪ್ರಮೋದ್​​​​​​. ಇದೀಗ ಮೊದಲ ಬಾರಿಗೆ ಉಡಾಳ್​ ಬಾಬು ಬಾಂಡ್​ ರವಿಯಾಗಿ ಎಲ್ಲರ ಮನಸೂರೆಗೊಳ್ಳಲು ಸಜ್ಜಾಗಿದ್ದಾರೆ. ಸದ್ಯದಲ್ಲೇ ಪ್ರಮೋದ್​, ಬಾಂಡ್​​ ರವಿ ಟೈಟಲ್​​ಗೆ ಬ್ರ್ಯಾಂಡ್​ ಅಂಬಾಸಿಡರ್​​ ಆಗೋದ್ರಲ್ಲಿ ಡೌಟೆ ಇಲ್ಲ ಅನ್ನುವಂತೆ ನಟಿಸಿದ್ದಾರೆ. ಚಿತ್ರದ ಟೈಟಲ್​ಗೂ ದೇವತಾ ಮನುಷ್ಯ ಅಪ್ಪು ಸಿಂಕ್​ ಅಗೋ ಎಮೋಷನ್ಸ್​ ಬಗ್ಗೆ ಪ್ರಮೋದ್​​ ಮನ್ಸು ಬಿಚ್ಚಿ ಮಾತನಾಡಿದ್ದಾರೆ

ಒಳ್ಳೆಯವನು ಕೆಟ್ಟವ್ನಾದ್ರೆ ಎಲ್ಲರೂ ನಂಬ್ತಾರೆ. ಆದ್ರೆ ಕೆಟ್ಟೋನು ಒಳ್ಳೆಯವಾದ್ರೆ ಅನ್ನೋ ಹಾರ್ಟ್​ ಟಚಿಂಗ್​​ ಡೈಲಾಗ್​ ಮೂಲಕ ಮಾಸ್​​ ಗೆಟಪ್​​ನಲ್ಲಿ ಬಾಂಡ್​​ ರವಿ ಮಿಂಚಿದ್ದಾರೆ. ಪಾತಕ ಲೋಕದೊಳಗೆ ಮೊದಲ ಬಾರಿಗೆ ರವಿ ತೊಡೆ ತಟ್ಟಲಿದ್ದಾರೆ. ಅಪ್ಪು ಹೆಸರಲ್ಲೇ ಸಿನಿಮಾ ಮಾಡ್ತಿದ್ದೀನಿ. ಒಟ್ಟು 20 ನಿಮಿಷ ನನ್​ ಜತೆ ಮಾತನಾಡಿದ್ರು. ನಿನ್​ ನೋಡ್ತಾನೆ ಇರಬೇಕು ಅಂದಿದ್ರು. ಹಂಬಲ್​ ವ್ಯಕ್ತಿ ಅಪ್ಪು ಗ್ರೇಟ್​​. ಅವ್ರು ಇದ್ದಿದ್ರೆ ಈ ಸಿನಿಮಾ ನೋಡಿ ತುಂಬಾ ಖುಷಿ ಪಡ್ತಿದ್ರಂತೆ.

ಗೀತಾ ಬ್ಯಾಂಗಲ್​ ಸ್ಟೋರ್​​ನಿಂದ ಚಿರಪರಿಚಿತನಾದ ಪ್ರಮೋದ್​ ಜನಮನ್ನಣೆ ಪಡೆದ ಪ್ರತಿಭಾನ್ವಿತ ಕಲಾವಿದ. ಈ ಸಿನಿಮಾದಲ್ಲಿ ಅದ್ಭುತ ಕಂಟೆಂಟ್​ ಇದೆಯಂತೆ. ಇಂಟ್ರಡಕ್ಷನ್​​ಗೆ ಎಲ್ಲರೂ ಸ್ಟನ್​ ಆಗ್ತಾರಂತೆ. ಐದು ನಿಮಿಷಗಳ ಕಾಲ ಚಪ್ಪಾಳೆಯ ಸುರಿಮಳೆಯಾಗಲಿದೆಯಂತೆ.

ಅಂತೂ ಸಿಕ್ಕಾಪಟ್ಟೆ ಭರವಸೆ ಮೂಡಿಸಿರೋ ಪ್ರಮೋದ್​​ಗೆ ಡಾ.ರಾಜ್​​​ಕುಮಾರ್​ ಸಖತ್​ ಇನ್​ಸ್ಪೈರ್​ ಆಗಿದ್ದಾರೆ. ಇದು ಪಕ್ಕಾ ಆ್ಯಕ್ಷನ್​​​ ಅಂಡ್​ ಲವ್​​ ಸಿನಿಮಾ. ಜತಗೆ ನವಿರಾದ ಪ್ರೇಮಕಥೆಯಲ್ಲಿ ರಕ್ತಸಿಕ್ತ ಕದನಗಳ ಕಲೆಯೂ ಬೆರೆತುಕೊಂಡಿದೆ. ನಿರ್ಮಾಪಕರಾದ ನರಸಿಂಹ ಮೂರ್ತಿ, ಮಲ್ಲಿಕಾರ್ಜುನ ಕಾಶಿ ಕಾನ್ಫಿಡೆಂಟ್​​​ ಆಗಿ ಹಣ ಸುರಿದಿದ್ದಾರೆ. ನಿರ್ದೇಶಕ ಪ್ರಜ್ವಲ್​​ ಎಸ್​​.ಎಸ್​​ ಭರವಸೆಯ ಟೀಸರ್​ ಕೊಟ್ಟಿದ್ದು ಸಿನಿಮಾ ಕೂಡ ಸಖತ್​ ಪ್ರಾಮಿಸಿಂಗ್ ಆಗಿದೆ.

ಮುಂಗಾರು ಮಳೆಯ ಸದ್ದಿನಲ್ಲೇ ಸಂಗೀತದ ಅಲೆ ಎಬ್ಬಿಸಿದ್ದ ಮ್ಯೂಸಿಕ್​ ಕಂಪೋಸರ್​ ಮನೋಮೂರ್ತಿ ಬಾಂಡ್​ ರವಿಗೆ ಸಾಥ್​ ನೀಡಿದ್ದಾರೆ. ಕೆ.ಎಸ್​ ಚಂದ್ರಶೇಖರ್​ ಕ್ಯಾಮೆರಾ ಎಲ್ಲರ ಕಣ್ಣರಳಿಸುವಂತೆ ಮಾಡಿದೆ.

ಮಂಡ್ಯ ಹೈದನ ಮನೋಘ್ಞ ಅಭಿನಯ ಇಲ್ಲೂ ಕಂಟಿನ್ಯೂ ಆಗುತ್ತಾ..? ಬಾಂಡ್​ ರವಿಯನ್ನ ಪ್ರೇಕ್ಷಕ ಮೆಚ್ಚಿಕೊಳ್ತಾನಾ  ಅನ್ನೋದನ್ನ ಕಾದು ನೋಡ್ಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES