Sunday, January 19, 2025

ಹೃದಯಾಘಾತದಿಂದ ಪ್ರಖ್ಯಾತ ಪೈಲ್ವಾನ್ ಸಾವು.!

ಧಾರವಾಡ; ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಹೃದಯಾಘಾತದಿಂದ ಪ್ರಖ್ಯಾತ ಪೈಲ್ವಾನ್ ಕುಸಿದು ಬಿದ್ದು ಸಾವಿಗೀಡಾದ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೃತ ಸಂಗಪ್ಪ ಬಳಿಗೇರ ಬೈಲಹೊಂಗಲದ ದೊಡವಾಡ ಗ್ರಾಮದವರಾಗಿದ್ದು, ಮೈಸೂರು ದಸರಾ ಸೇರಿದಂತೆ ವಿವಿಡೆದೆ ಕುಸ್ತಿ ಆಡಿದ್ದರು. ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಹೃದಯಾಘಾತ ಸಂಭವಿಸಿದೆ. ಈ ವೇಳೆಯಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಪೈಲ್ವಾನ್​ ಸಂಗಪ್ಪ ಅವರ ಸಾವೀಗಿಡಾಗಿದ್ದಾರೆ. ಇನ್ನು ನೆಚ್ಚಿನ ಪೈಲ್ವಾನ್ ನಿಧನಕ್ಕೆ ಅಪಾರ ಪ್ರಮಾಣದ ಜನರು ದುಃಖ ವ್ಯಕ್ತಪಡಿಸಿದರು.

ಇಂದು(ಬುಧವಾರ) ಬೆಳಗ್ಗೆ ವಾಕಿಂಗ್‍ಗೆ ತೆರಳಿ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ಧಾರವಾಡದ ಮದಿಹಾಳದ ಬಳಿ ತನ್ನ ಗೆಳೆಯನ ಜೊತೆಗೆ ಸಂಗಪ್ಪ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಹೃದಯಾಘಾತವಾಗಿ ಕುಸಿದುಬಿದ್ದು ಅವರು ಸಾವನ್ನಪ್ಪಿದ್ದಾರೆ.

RELATED ARTICLES

Related Articles

TRENDING ARTICLES