Monday, December 23, 2024

ಹಳ್ಳ ಹಿಡಿದ ಮಹತ್ವಾಕಾಂಕ್ಷೆ ಬೈಕ್ ಆ್ಯಂಬುಲೆನ್ಸ್ ಯೋಜನೆ..!

ಬೆಂಗಳೂರು : 2015ರಲ್ಲಿ ಪ್ರಾರಂಭವಾದ ಬೈಕ್ ಆಂಬುಲೆನ್ಸ್ ಸೇವೆಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಗರದಲ್ಲಿ ಸಂಚರಿಸುತ್ತಿದ್ದ 19 ಬೈಕ್ ಆಂಬುಲೆನ್ಸ್ಗಳಲ್ಲಿ ಸದ್ಯ ನಾಲ್ಕೈದು ಬೈಕ್ ಆಂಬುಲೆನ್ಸ್ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸಿಬ್ಬಂದಿ ಸಮಸ್ಯೆ ಸೇರಿ ವಿವಿಧ ಕಾರಣಗಳಿಂದ ಇದರ ನಿರ್ವಹಣೆಯೂ ಆರೋಗ್ಯ ಇಲಾಖೆಗೆ ಸಮಸ್ಯೆಯಾಗಿ ಪರಿಣಮಿಸಿದೆ. ಆದ್ದರಿಂದ ಕೆಟ್ಟು ನಿಂತ ಆರು ಬೈಕ್ ಆಂಬುಲೆನ್ಸ್ಗಳ ರಿಪೇರಿ ಕಾರ್ಯ ನಡೆದಿಲ್ಲ. ನಗರದ ಜಿವಿಕೆ ಕೇಂದ್ರದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಆಂಬುಲೆನ್ಸ್ ಗಳು ತುಕ್ಕು ಹಿಡಿಯುತ್ತಿವೆ. ಈ ಬಗ್ಗೆ ಜಿವಿಕೆ ಹಾಗೂ ಆರೋಗ್ಯ ಇಲಾಖೆ ತಲೆಕೆಡಿಸಿಕೊಳ್ತಿಲ್ಲ.

ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬೈಕ್ ಆಂಬುಲೆನ್ಸ್ಗಳನ್ನು ಪರಿಚಯಿಸಲಾಗಿತ್ತು.ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 2018ರಿಂದ 2022ರ ಜುಲೈ ಅಂತ್ಯದವರೆಗೆ 92,905 ಮಂದಿ ನಗರದಲ್ಲಿ ಈ ಸೇವೆ ಪಡೆದಿದ್ದಾರೆ. ಆದರೆ, ವರ್ಷದಿಂದ ವರ್ಷಕ್ಕೆ ಬೈಕ್ ಆಂಬುಲೆನ್ಸ್ ಸೇವೆ ಪಡೆಯುವವರ ಸಂಖ್ಯೆ ಇಳಿಮುಖ ಆಗುತ್ತಿದೆ.ಗಾಯಗೊಂಡಲ್ಲಿ ಆಂಬುಲೆನ್ಸ್‌ಗೆ ಮೊರೆ ಹೋಗುತ್ತಾರೆ. ಸಣ್ಣ ಗಾಯವಾದವರು ಬೈಕ್ ಆಂಬುಲೆನ್ಸ್ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಹತ್ತಿರದ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಲ ರಾಷ್ಟ್ರಗಳಲ್ಲಿ ಬೈಕ್ ಆಂಬುಲೆನ್ಸ್ ಸೇವೆ ಯಶಸ್ವಿಯಾಗಿದೆ. ಅಧಿಕ ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಶೀಘ್ರ ಸೇವೆ ಒದಗಿಸಲು ಸಹಕಾರಿ ಎಂಬ ಕಾರಣಕ್ಕೆ ಈ ಸೇವೆ ಪರಿಚಯಿಸಲಾಗಿದೆ. ಆದರೆ,ನಗರದಲ್ಲಿ ಇದಕ್ಕೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.ಆದ್ರೆ ರೋಗಿಗಳ ಉಪಯೋಗಕ್ಕೆ ಅಂತ ಲಕ್ಷ ಲಕ್ಷ ಕೊಟ್ಟು ಖರೀದಿ ಮಾಡಿರೋ ಬೈಕ್ ಆಂಬುಲೆನ್ಸ್ ನಿರ್ವಹಣೆ ಮಾಡದೆ ಮೂಲೆಗೆ ಹಾಕಿರೋದು ನಿಜಕ್ಕೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣ್ತದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES