Monday, November 4, 2024

ರವಿಮಾಮನಿಗೆ ವಿಕ್ರಮ ಬೇತಾಳನಾಗಿದ್ದ ಜಮೀರ್​ ಪುತ್ರ..!

ಮಾಯಗಂಗೆ ಸಾಂಗ್ ನೋಡಿ, ಬನಾರಸ್ ಒಂದು ಪಕ್ಕಾ ಲವ್ ಸ್ಟೋರಿ ಅಂದುಕೊಂಡಿದ್ದ ಸಿನಿಪ್ರಿಯರಿಗೆ ಝೈದ್ ಖಾನ್ ಬಿಗ್ ಸರ್​ಪ್ರೈಸ್ ಕೊಟ್ಟಿದ್ದಾರೆ. ಟೈಮ್ ಟ್ರಾವಲ್ ಮಿಸ್ಟರಿಯ ಥ್ರಿಲ್ಲಿಂಗ್ ಕಹಾನಿಯೊಂದಿಗೆ ಪ್ಯಾನ್ ಇಂಡಿಯಾ ಬ್ಯಾಂಗ್ ಮಾಡ್ತಿದ್ದಾರೆ. ಅಲ್ಲದೆ ಕ್ರೇಜಿಸ್ಟಾರ್​ಗೆ ಬೇತಾಳನಾಗಿ ಕಾಡಿದ ಝೈದ್, ಸಲ್ಮಾನ್ ಖಾನ್ ಸಹೋದರನನ್ನ ಕರೆಸಿದ ಮೆಮೊರಬಲ್ ಮೊಮೆಂಟ್ಸ್​​ ಇಲ್ಲಿವೆ. ಕಣ್ತುಂಬಿಕೊಳ್ಳಿ.

  • ಐ ಡೋಂಟ್​ ಲೈಕ್ ವಯಲೆನ್ಸ್​​.. ಝೈದ್​ KGF​ ಡೈಲಾಗ್​
  • ಸೌತ್ ಸಿನಿಮಾಗೆ ಸಲ್ಲೂ ಸಹೋದರ ಅರ್ಬಾಜ್ ಬೋಲ್ಡ್
  • ಪ್ಯಾನ್ ಇಂಡಿಯಾ ಟೈಂ ಟ್ರಾವೆಲ್​ಗೆ ಝೈದ್ ಮುನ್ನುಡಿ..!

ಯೆಸ್.. ಇದು ರೀಸೆಂಟ್ ಆಗಿ ರಿಲೀಸ್ ಆಗಿರೋ ಬನಾರಸ್ ಅನ್ನೋ ಪ್ಯಾನ್ ಇಂಡಿಯಾ ಚಿತ್ರದ ಟ್ರೈಲರ್ ಝಲಕ್. ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಸದ್ದು ಮಾಡ್ತಿದೆ. ಈ ಚಿತ್ರದ ಮೂಲಕ ಪೊಲಿಟಿಷಿಯನ್ ಜಮೀರ್ ಖಾನ್ ಪುತ್ರ ಝೈದ್ ಖಾನ್ ನಾಯಕನಟನಾಗಿ ಬೆಳ್ಳಿಪರದೆಗೆ ಕಾಲಿಡ್ತಿದ್ದಾರೆ.

ಒರಾಯಲ್ ಮಾಲ್​ನ ಪಿವಿಆರ್​ನಲ್ಲಿ ನಡೆದ ಟ್ರೈಲರ್ ಲಾಂಚ್ ಇವೆಂಟ್​ಗೆ ಕನ್ನಡದ ಜೊತೆ ಪರಭಾಷಾ ಸಿನಿ ಪತ್ರಕರ್ತರೂ ಆಗಮಿಸಿದ್ರು. ಕನ್ನಡದ ಟ್ರೈಲರ್​ನ ಲಕ್ಕಿ ಹ್ಯಾಂಡ್ ಕ್ರೇಜಿಸ್ಟಾರ್ ರವಿಚಂದ್ರನ್ ಲಾಂಚ್ ಮಾಡಿದ್ರೆ, ಹಿಂದಿ ಟ್ರೈಲರ್​ನ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಲಾಂಚ್ ಮಾಡಿದ್ರು.

ರವಿಮಾಮನಿಗೆ ಶೂಟಿಂಗ್ ಇದ್ರೂ, ಫ್ಲೈಟ್ ಟಿಕೆಟ್​ನ ಪೋಸ್ಟ್​ಪೋನ್ ಮಾಡಿಕೊಂಡು ಬಂದು ಝೈದ್​ಗೆ ಶುಭ ಹಾರೈಸಿದ್ರು. ಅದಕ್ಕೆ ಕಾರಣ ವಿಕ್ರಮ ಬೇತಾಳನಂತೆ ಕನಸುಗಾರನ ಬೆನ್ನಿಗೆ ಬಿದ್ದಿದ್ದರಂತೆ ಝೈದ್. ನವ ನಾಯಕನಟ ಅಂತ ಅನಿಸಲ್ಲ, ಟೈಂ ಟ್ರಾವೆಲ್ ಅನ್ನೋ ಹುಳ ಬಿಟ್ಟಿದ್ದೀರಾ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಅಂತ ಕ್ರೇಜಿ ಮಾತುಗಳಿಂದ ತಂಡವನ್ನು ಹುರಿದುಂಬಿಸಿದ್ರು ರಣಧೀರ.

ನಾಯಕನಟಿ ಸೋನಲ್ ಬಗ್ಗೆ ಮಾತನಾಡಿದ ರವಿಮಾಮ, ನನ್ನ ಜೊತೆ ನಟಿಸಲ್ಲ ಅಂದಿದ್ದೇ ಒಳ್ಳೆಯದಾಯ್ತು. ಆ ಸಿನಿಮಾ ತೋಪಾಯ್ತು ಅಂತ ಬನಾರಸ್ ನಟೀಮಣಿಯ ಕಾಲೆಳೆದರು.

ಇನ್ನು ಸೌತ್ ಸಿನಿಮಾಗಳ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ಅರ್ಬಾಜ್ ಖಾನ್, ಝೈದ್ ಬಗ್ಗೆ ಕೊಂಡಾಡಿದ್ರು. ಒಲವೇ ಮಂದಾರ, ಟೋನಿ, ಬೆಲ್​ಬಾಟಂನಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿರೋ ಜಯತೀರ್ಥ ನಿರ್ದೇಶನದ ಸಿನಿಮಾ ಬನಾರಸ್. ಕಾಶಿಯಲ್ಲೇ ಇಡೀ ಚಿತ್ರದ ಶೂಟಿಂಗ್ ನಡೆದಿದ್ದು, ಕಾವೇರಿ ನದಿಯಿಂದ ಗಂಗೆಯವರೆಗೂ ಚಿತ್ರದ ಕಥೆ ಸಾಗಲಿದೆ. ಅಂದಹಾಗೆ ಕನ್ನಡದ ಚಿತ್ರರಂಗದ ಮಟ್ಟಿಗೆ ಇದೊಂದು ವಿನೂತನ ಪ್ರಯತ್ನವಾಗಿದ್ದು, ಟೈಂ ಟ್ರಾವೆಲ್ ಕುರಿತ ಕಥೆ ಇದೇ ಮೊದಲು ಅನ್ನುವಂತಿದೆ.

ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದಲ್ಲಿ ತಯಾರಾಗ್ತಿರೋ ಈ ಸಿನಿಮಾದಲ್ಲಿ ಝೈದ್​ಗೆ ಸೋನಲ್ ಮೊಂಥೆರೋ ನಾಯಕಿಯಾಗಿದ್ದು, ಇವ್ರ ಕೆಮಿಸ್ಟ್ರಿ ನೋಡುಗರನ್ನ ಇಂಪ್ರೆಸ್ ಮಾಡುವಂತಿದೆ. ಅಲ್ಲದೆ, ಹಿರಿಯನಟ ದೇವರಾಜ್, ಸುಜಯ್ ಶಾಸ್ತ್ರಿ, ಸ್ವಪ್ನ ಹಾಗೂ ಅಚ್ಯುತ್ ಕುಮಾರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಸಿಗಲಿದ್ದಾರೆ.

ಎಲ್ಲರ ಬಳಿಕ ಲೇಟ್ ಆಗಿ ಮಾತಾಡಿದ್ರೂ, ಲೇಟೆಸ್ಟ್ ಆಗಿ ಮಾತು ಮುಂದುವರೆಸಿದ ಝೈದ್ ಇಡೀ ತಂಡಕ್ಕೆ ಧನ್ಯವಾದ ಅರ್ಪಿಸಿದ್ರು. ಅಲ್ಲದೆ, ಕನ್ನಡಿಗರ ಪ್ರೀತಿ, ವಿಶ್ವಾಸ, ಆಶೀರ್ವಾದ ಇದ್ರೆ ಪ್ಯಾನ್ ಇಂಡಿಯಾ ಏನು, ಪ್ಯಾನ್ ವರ್ಲ್ಡ್​ ಸಿನಿಮಾನೇ ಮಾಡಬಹುದು ಎಂದರು. ನನ್ನ ಉದ್ದೇಶ ಕನ್ನಡ ಸಿನಿಮಾ ಮಾಡೋದಷ್ಟೇ ಎಂದ ಝೈದ್, ಟ್ರೈಲರ್ ಲಾಂಚ್ ಮಾಡಿಕೊಟ್ಟ ಕನಸುಗಾರ ರವಿಮಾಮ ಹಾಗೂ ಅರ್ಬಾಜ್ ಖಾನ್​ಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ರು.

ವಿಶೇಷ ಅಂದ್ರೆ ಚಿತ್ರದಲ್ಲಿರೋ ಮಾಸ್ ಡೈಲಾಗ್ ಒಂದು ಕೆಜಿಎಫ್​ ರಾಕಿಭಾಯ್ನ ನೆನಪಿಸ್ತಿದೆ. ಹೌದು.. ಌಕ್ಷನ್ ಸೀಕ್ವೆನ್ಸ್ ವೇಳೆ ಐ ಡೋಂಟ್ ಲೈಕ್ ವಯಲೆನ್ಸ್ ಅನ್ನೋ ಡೈಲಾಗ್, ಝೈದ್​ರಲ್ಲಿರೋ ಮಾಸ್ ಎಲಿಮೆಂಟ್ಸ್​ನ ಎಕ್ಸ್​ಪ್ಲೋರ್ ಮಾಡ್ತಿದೆ.

ಒಟ್ಟಾರೆ ಮಾಯಗಂಗೆ ಹಾಡಿನಿಂದ ಬನಾರಸ್ ಒಂದು ಪ್ರೇಮ್ ಕಹಾನಿ ಅಂದುಕೊಂಡಿದ್ದ ಪ್ರೇಕ್ಷಕರಿಗೆ ಟ್ರೈಲರ್​ನಿಂದ ಬಿಗ್ ಸರ್​ಪ್ರೈಸ್ ಕೊಟ್ಟಿದ್ದಾರೆ ಝೈದ್ & ಜಯತೀರ್ಥ. ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗಲಿದ್ದು, ವರ್ಲ್ಡ್​ ವೈಡ್ ಈ ಪ್ರಯೋಗಾತ್ಮಕ ಚಿತ್ರ ತೆರೆಗಪ್ಪಳಿಸಲಿದೆ. ಬಾಯ್​ಕಾಟ್ ಅಲೆ ಎದ್ದಿರೋ ಬನಾರಸ್​ಗೆ ಅದು ಆದಷ್ಟು ಬೇಗ ಶಮನವಾಗಲಿ. ಕಲಾವಿದನಿಗೆ ಜಾತಿ, ಧರ್ಮ, ಮತದ ಎಲ್ಲೆ ಇಲ್ಲ ಅನ್ನೋದು ಪ್ರೂವ್ ಆಗಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES