Thursday, January 23, 2025

ಕೇಂದ್ರ ಸರ್ಕಾರ PFI ನಿಷೇಧ ಮಾಡಿದೆ : ಯಡಿಯೂರಪ್ಪ

ಶಿವಮೊಗ್ಗ : ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಹಗಲು ದರೋಡೆ ಮಾಡಿದ್ರು ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿಲ್ಲ ಶಿವಮೊಗ್ಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಯನ್ನು ಸೋನಿಯಾಗಾಂಧಿ, ರಾಹುಲ್ ಗಾಂಧಿ ಸಿದ್ದರಾಮಯ್ಯ ಅಲ್ಲಗಳೆದಿಲ್ಲ. ಶಿಕ್ಷಕರ ಅಕ್ರಮದ ಬಗ್ಗೆ ಕಾಂಗ್ರೆಸ್ ನಾಯಕರು ನಾಡಿನ ಜನತೆಗೆ ಉತ್ತರ ಕೊಡಬೇಕು. ತನಿಖೆ ನಡೆದರೆ ಎಲ್ಲಾ ಹೊರಗೆ ಬರುತ್ತದೆ. ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಹಗರಣ ನಡೆದಿದೆ, ಹೀಗಾಗಿಯೇ ರಾಜ್ಯದ ಜ‌ನ ಅವರನ್ನು ಅಧಿಕಾರದಿಂದ ದೂರ ಇಟ್ಟರು. ಎಂದರು.

ಇನ್ನು, ಕೇಂದ್ರ ಸರ್ಕಾರ ಪಿಎಫ್​​ಐ ನಿಷೇಧ ಮಾಡಿದೆ. ಪಿಎಫ್​​ಐ ಮೇಲೆ ಇಂದು 40 ಕಡೆ ದಾಳಿ ಆಗಿದೆ. ದಾಳಿ ಪರಿಶೀಲಿಸಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಸಿದ್ದರಾಮಯ್ಯ ಡಿಕೆಶಿ ಸಿಎಂ ಬೊಮ್ಮಾಯಿ ವಿರುದ್ದ ಪೋಸ್ಟರ್ ಅಂಟಿಸಿದ್ದಾರೆ. ಈ ಬಗ್ಗೆ ದೂರು‌ ಕೊಟ್ಟಿದ್ದೇವೆ. ವಿಪಕ್ಷದ ನಾಯಕರಾಗಿ ಈ ರೀತಿ ವರ್ತನೆ ಕ್ಷೋಭೆ ತರುವುದಿಲ್ಲ. ಇದು ಮೊದಲೇ ಗೊತ್ತಿತ್ತು. ಈ ರೀತಿಯ ಜನರು ಬಹಳಷ್ಟು ಇದ್ದಾರೆ. ಈ ಹಿಂದೆ ಶಿಕಾರಿಪುರದಲ್ಲೂ ಬಂಧಿಸಲಾಗಿತ್ತು. ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ಆಗಿದೆ ಎಂದರು.

RELATED ARTICLES

Related Articles

TRENDING ARTICLES