Thursday, December 26, 2024

ಮಂತ್ರಿ ಮಾಲ್​ನಲ್ಲಿ ಮೇಳೈಸಿದ ನವರಸ ತೋತಾಪುರಿ ಉತ್ಸವ

ಸಿನಿಪ್ರಿಯರು ತೋತಾಪುರಿ ತೊಟ್ಟು ಕೀಳೋಕೆ ದಿನಗಣನೆ ಶುರುವಾಗಿದೆ. ದಸರಾ ಶುರುವಾಗಿದ್ದೇ ತಡ ಪ್ರೊಮೋಷನಲ್ ಆ್ಯಕ್ಟಿವಿಟೀಸ್ ಕೂಡ ಗರಿಗೆದರಿವೆ. ರೀಸೆಂಟ್ ಆಗಿ ಮಂತ್ರಿ ಮಾಲ್​ನಲ್ಲಿ ನಡೆದ ತೋತಾಪುರಿ ಉತ್ಸವದಲ್ಲಿ ಜಗ್ಗೇಶ್ ಸಮೇತ ಇಡೀ ಚಿತ್ರತಂಡ ಎಲ್ಲರ ಹುಬ್ಬೇರಿಸಿತು. ಅದ್ರಲ್ಲೂ ಜಗ್ಗಣ್ಣನ ಕಾಮಿಡಿ ಝಲಕ್ ನಕ್ಕು ನಲಿಸಿತು.

  • 40 ದೇಶಗಳಲ್ಲಿ ತೋತಾಪುರಿ ಸವಿರುಚಿಯ ನಗುವಿನ ಹಬ್ಬ ಶುರು
  • ಅಪ್ಪ ಗಾರೆ ಕೆಲಸ ಮಾಡ್ತಿದ್ದ ಮಾಲ್​ನ ನೆನೆದು ಜಗ್ಗಣ್ಣ ಭಾವುಕ
  • ಸೊಂಟ ಬಳುಕಿಸಿದ ಅದಿತಿ, ಸುಮನ್.. ಜಗ್ಗೇಶ್ ಮಸ್ತ್ ಕಾಮಿಡಿ

ತೋತಾಪುರಿ ಅಂದಾಕ್ಷಣ ಎಲ್ರ ಬಾಯಲ್ಲೂ ನೀರೂರಲಿದೆ. ಕಾರಣ ಅದ್ರ ಸ್ವಾಧ. ಇದೀಗ ಆ ಮಾವಿನ ಹಣ್ಣಿನಷ್ಟೇ ರಸಭರಿತ ಮನರಂಜನೆಯ ರಸಪಾಕ ಹೊತ್ತು ತೋತಾಪುರಿ ಸಿನಿಮಾ ಬರ್ತಿದೆ. ದಸರಾ ಹಬ್ಬದ ವಿಶೇಷ ಸಂಭ್ರಮ, ಸಡಗರವನ್ನು ಡಬಲ್ ಮಾಡೋಕೆ ಬರ್ತಿರೋ ನವರಸ ನಾಯಕ ಜಗ್ಗೇಶ್​ರ ತೋತಾಪುರಿ, ಈ ವರ್ಷದ ಬಿಗ್ಗೆಸ್ಟ್ ಕಾಮಿಡಿ ಎಂಟರ್​ಟೈನರ್.

ಹೌದು.. ನೀರ್​ದೋಸೆ ವಿಜಯ್ ಪ್ರಸಾದ್ ನಿರ್ದೇಶನ ಹಾಗೂ ಕೆಎ ಸುರೇಶ್ ನಿರ್ಮಾಣದ ಈ ಚಿತ್ರ ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ಪ್ಯಾನ್ ಇಂಡಿಯಾ ತೆರೆಗಪ್ಪಳಿಸುತ್ತಿದೆ. ವಿಶ್ವದಾದ್ಯಂತ ಕೆಜಿಎಫ್ ರೀತಿ ಎರಡೆರಡು ಭಾಗಗಳಲ್ಲಿ ಬರ್ತಿರೋ ಚಿತ್ರ ಇದಾಗಿದ್ದು, ವಿಶ್ವದಾದ್ಯಂತ ಸುಮಾರು 40ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗ್ತಿದೆ.

ಜಗ್ಗೇಶ್ ಜೊತೆ ಡಾಲಿ ಧನಂಜಯ, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ದತ್ತಣ್ಣ ಸೇರಿದಂತೆ ಬಹುದ್ಡೊಡ್ಡ ತಾರೆಯರು ದಂಡು ಇಲ್ಲಿದೆ. ಇಲ್ಲಿ ಸಿಕ್ಕಾಪಟ್ಟೆ ಕಾಮಿಡಿ ಜೊತೆ ಯರ್ರಾಬಿರ್ರಿ ಎಮೋಷನ್ಸ್ ಕೂಡ ಇರಲಿದೆ. ಕಾರಣ ಇದೊಂದು ಸಂದೇಶಾತ್ಮಕ ಸಿನಿಮಾ. ಸಂಬಂಧಗಳ ಬಾಂಧವ್ಯ ಬೆಸುಗೆಯ ದೃಶ್ಯಚಿತ್ತಾರ. ಮನಸುಗಳ ಚಿಂತನ, ಮಂಥನದ ಕಥಾನಕ.

ಸಾಂಗ್ಸ್ ಹಾಗೂ ಟ್ರೈಲರ್​ನಿಂದ ವ್ಹಾವ್ ಫೀಲ್ ಕೊಟ್ಟಿರೋ ತೋತಾಪುರಿ ಇದೇ ಸೆಪ್ಟೆಂಬರ್ 30ಕ್ಕೆ ನಿಮ್ಮನ್ನ ರಂಜಿಸೋಕೆ ಬರ್ತಿದೆ. ಪ್ರೊಮೋಷನ್ಸ್ ಕೂಡ ಭರ್ಜರಿಯಾಗೇ ನಡೀತಿದ್ದು, ಮಂತ್ರಿ ಮಾಲ್​ನಲ್ಲಿ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೀತು. ಜಗ್ಗೇಶ್ ಅಲ್ಲಿ ನೆರೆದಿದ್ದ ಪ್ರೇಕ್ಷಕರನ್ನ ಸಿಕ್ಕಾಪಟ್ಟೆ ರಂಜಿಸಿದ್ದಲ್ಲದೆ, ನಮ್ಮಪ್ಪ ಇದೇ ಮಾಲ್​ಗೆ ಗಾರೆ ಕೆಲಸ ಮಾಡಿದ್ರು ಅಂತ ಎಮೋಷನಲ್ ಸ್ಟೋರಿ ಹೇಳಿದ್ರು.

ಇನ್ನು ಅದಿತಿ ಪ್ರಭುದೇವ ಮುಸ್ಲಿಂ ಸಮುದಾಯದ ಹೆಣ್ಣು ಮಗಳಾಗಿ ಕಾಣಸಿಗಲಿದ್ದು, ಕ್ರಿಶ್ಚಿಯನ್ ಹೆಣ್ಣಾಗಿ ಕಾಣಿಸಿಕೊಂಡಿರೋ ಎವರ್​ಗ್ರೀನ್ ಬ್ಯೂಟಿ ಸುಮನ್ ರಂಗನಾಥ್ ಜೊತೆ ವೇದಿಕೆ ಹಂಚಿಕೊಂಡ್ರು. ಸಿನಿಮಾ ಬಗ್ಗೆ ಹೆಮ್ಮೆಯ ಮಾತುಗಳಾಡೋದ್ರ ಜೊತೆಗೆ ಸೊಂಟ ಬಳುಕಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದ್ರು.

ರಾಜ್ ಕಪ್ ವಿಶೇಷ ಡಾಲಿ ದುಬೈ ಪ್ರಯಾಣದಲ್ಲಿದ್ದ ಹಿನ್ನೆಲೆ ಕಾರ್ಯಕ್ರಮಕ್ಕೆ ಗೈರಾಗಿದ್ರು. ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ನಿರ್ಮಾಪಕ ಸುರೇಶ್ ಕೂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಲ್ಲದೆ, ಇದು ದಸರಾಗೆ ಕೊಡ್ತಿರೋ ಬೆಸ್ಟ್ ಗಿಫ್ಟ್ ಎಂದರು. ಒಟ್ಟಾರೆ ನಗುವಿನ ಟಾನಿಕ್ ಕೊಡೋಕೆ ತೋತಾಪುರಿ ಟೀಂ ಟೊಂಕ ಕಟ್ಟಿ ನಿಂತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES