Sunday, December 22, 2024

SDPI ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಫರೀಧ್ ಅರೆಸ್ಟ್

ಹಾಸನ: ಶಾಂತಿ‌ ಸೌಹಾರ್ದತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಎಸ್‌ಡಿಪಿಐ ಮುಖಂಡ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಫರೀಧ್ ಹಾಗೂ ಅಫ್ಸರ್​ ನನ್ನ ಶನಿವಾರ ಸಂತೆ ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆ ಮುಖಂಡರ ಮನೆ ಮೇಲೆ ಇಂದು ದಾಳಿ ನಡೆಸಿ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಫರೀಧ್ ಹಾಗೂ ಕೊಡಗು ಜಿಲ್ಲೆಯ ಎಸ್‌ಡಿಪಿಐ ಮುಖಂಡ‌ ಅಫ್ಸರ್ ನನ್ನ ವಶಕ್ಕೆ ಪಡೆಯಲಾಗಿದೆ.

ಗೃಹ ಇಲಾಖೆ ನಿರ್ದೇಶನ ಮೇರೆಗೆ ವಶಕ್ಕೆ ಇಂದು ಇಬ್ಬರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಇಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿರುವುದಾಗಿ ಹಾಸನ ಎಸ್​ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES