Saturday, December 28, 2024

ಕಿಂಗ್​ ಖಾನ್​ಗೆ ಬಲೆ ಬೀಸಿದ ಹೊಂಬಾಳೆ ಫಿಲ್ಮ್ಸ್​​

ಬೆಂಗಳೂರು; ಸ್ಟಾರ್​ ಡೈರೆಕ್ಟರ್​ ಅಟ್ಲಿ ಹಾಗೂ ಕಿಂಗ್​ ಖಾನ್​ ಶಾರೂಖ್​​ ಖಾನ್​​ ಕಾಂಬೋದಲ್ಲಿ ಜವಾನ್​​​ ಕಮಾಲ್​ ಮಾಡೋಕೆ ಬರ್ತಿದೆ. ಈ ನಡುವೆ ಇನ್ನೊಂದು ಸುದ್ದಿ ವರ್ಲ್ಡ್​​ ವೈಡ್​​​ ಸಂಚಲನ ಮೂಡಿಸಿದೆ.

ಭಾರತದ ಪ್ರತಿಷ್ಟಿತ ಫಿಲ್ಮ್​​ ಬ್ಯಾನರ್​​ಗಳಲ್ಲಿ ಹೊಂಬಾಳೆ ಫಿಲ್ಮ್ಸ್​​​​ ಕೂಡ ಒಂದು. ಕೆಜಿಎಫ್​​, ಸಲಾರ್​​ನಂತಹ ಬಹುಕೋಟಿ ವೆಚ್ಚದ ಸಿನಿಮಾಗಳ ಸೂತ್ರಧಾರಿ ಈ ಅದ್ಧೂರಿ ಸಂಸ್ಥೆ. ಇದೀಗ ಹೊಂಬಾಳೆ ಕಣ್ಣಿಟ್ಟಿರೋದು ಬಾಲಿವುಡ್​ ಕಿಂಗ್​ ಖಾನ್​​ ಶಾರೂಖ್​ ಖಾನ್​​ ಮೇಲೆ. ಸದ್ಯ ಈ ಸುದ್ದಿ ಬೆಂಕಿ ಬಿರುಗಾಳಿ ಎಬ್ಬಿಸಿದ್ದು ಎಲ್ಲೆಡೆ ಟಾಕ್ ಆಫ್​ ದಿ ಟೌನ್​ ಆಗಿದೆ.

ವಿಜಯ್​ ಕಿರಗಂದೂರ್ ಸಾರಥ್ಯದ ಹೊಂಬಾಳೆ ಫಿಲ್ಮ್ಸ್​​​ ಬಲೆ ಬೀಸಿದ್ರೆ ಅಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಬೀಳೋದು ಸಹಜ. ಎನ್​ಟಿಆರ್​​​, ಡಾರ್ಲಿಂಗ್​ ಪ್ರಭಾಸ್​ ಅವರಂಥ ಘಟಾನುಘಟಿಗಳಿಗೆ ಮೇವು ಹಾಕಿ ಖಜಾನೆ ತುಂಬಿಸಿಕೊಳ್ತಿರೋ ಹೊಂಬಾಳೆ ಫಿಲ್ಮ್ಸ್​​ ಇದೀಗ ಕಿಂಗ್​ ಖಾನ್​ಗೆ ಬಲೆ ಬೀಸಿದೆ.

ಸಲಾರ್​, ಕಾಂತಾರ, ಬಘೀರ, ಕೆಜಿಎಫ್​​-3, ಟೈಸನ್​​ ಹೀಗೆ ಸಾಲು ಸಾಲು ಸಿನಿಮಾಗಳ ಮೂಲಕ ಇಂಡಿಯನ್​ ಸಿನಿ ದುನಿಯಾನ ರೂಲ್​ ಮಾಡೋಕೆ ಹೊರಟಿರೋ ಹೊಂಬಾಳೆ ಹೊಸ ಪ್ಲಾನ್​ ಮಾಡಿಕೊಂಡಿದೆ. ಇತ್ತ ಶಾರೂಖ್​ ಖಾನ್​ ಕೂಡ ಜವಾನ್​, ಟೈಗರ್​-3, ಡುಂಕಿ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರನ್ನ ಬಿಗ್​ ಬಜೆಟ್​ ಪ್ಯಾನ್​ ಇಂಡಿಯಾ ಚಿತ್ರಕ್ಕೆ ಸೆಳೆಯೋದಕ್ಕೆ ಸಜ್ಜಾಗಿದೆ ಹೊಂಬಾಳೆ ಟೀಮ್​.

ಪರಭಾಷೆಯ ಕಲಾವಿದರು ಕರುನಾಡಿಗೆ ಎಂಟ್ರಿ ಕೊಟ್ಟರೆ ಕಣ್ಣನ್ನ ಪಿಳಿ ಪಿಳಿ ಬಿಟ್ಟು ನೋಡ್ತಿದ್ದ ಕಾಲ ಬದ್ಲಾಗಿದೆ. ಕನ್ನಡ ನೆಲದ ಸಿನಿಮಾ ಸಂಸ್ಥೆಗಳು ಸೂಪರ್​ ಸ್ಟಾರ್​ಗಳಿಗೆ ಸಿನಿಮಾ ನಿರ್ಮಾಣ ಕಾಲ ಬಂದಿದೆ. ಏನೇ ಆದ್ರೂ ಈಗೆಲ್ಲಾ ಎಲ್ಲಾ ವುಡ್​​ಗಳ ಅಬ್ಬರ ಕಮ್ಮಿ ಆಗಿದೆ. ಏನಿದ್ರೂ ಇಂಡಿಯನ್​​ ಸಿನಿಮಾ ಅನ್ನುವಂತಾಗಿದೆ. ಎನಿವೇ ಹೊಂಬಾಳೆ ಬ್ಯಾನರ್​ಗೆ ಆಲ್​ ದಿ ಬೆಸ್ಟ್​ ಹೇಳೋಣ.

ರಾಕೇಶ್ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES